Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸೀತಾರಾಮ ನಟ ಗಗನ್ ಚಿನ್ನಪ್ಪ ಹೆಸರಿನಲ್ಲಿ ಮೋಸ: ಎಚ್ಚರಿಸಿದ ನಟ

ಸೀತಾರಾಮ ನಟ ಗಗನ್ ಚಿನ್ನಪ್ಪ ಹೆಸರಿನಲ್ಲಿ ಮೋಸ: ಎಚ್ಚರಿಸಿದ ನಟ
ಬೆಂಗಳೂರು , ಶನಿವಾರ, 9 ಸೆಪ್ಟಂಬರ್ 2023 (17:55 IST)
Photo Courtesy: Twitter
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಇದೀಗ ಸೂಪರ್ ಹಿಟ್ ಆಗಿರುವ ಸೀತಾರಾಮ ಧಾರವಾಹಿಯ ನಾಯಕ ಗಗನ್ ಚಿನ್ನಪ್ಪ ತಮ್ಮ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ ಬಗ್ಗೆ ನೆಟ್ಟಿಗರ ಗಮನ ಸೆಳೆದಿದ್ದಾರೆ.

ಇನ್ ಸ್ಟಾಗ್ರಾಂನಲ್ಲಿ ತಮ್ಮ ಹೆಸರಿನಲ್ಲಿ ನಕಲಿ ಖಾತೆ ತೆರೆದುಕೊಂಡು ಬಬ್ಬು ಖಾನ್ ಎಂಬ ವ್ಯಕ್ತಿಯೊಬ್ಬ ಹಣ ಕೇಳುತ್ತಿರುವುದು  ಗಗನ್ ಗಮನಕ್ಕೆ ಬಂದಿದೆ.

ಹೀಗಾಗಿ ನನ್ನ ಹೆಸರಿನಲ್ಲಿ ಯಾರೋ ಫೇಕ್ ಐಡಿ ಕ್ರಿಯೇಟ್ ಮಾಡಿ ಹಣ ಕೇಳುತ್ತಿದ್ದಾರೆ. ದಯವಿಟ್ಟು ಯಾರೂ ಮೋಸ ಹೋಗಬೇಡಿ ಎಂದು ಮನವಿ ಮಾಡಿದ್ದಾರೆ. ಸೆಲೆಬ್ರಿಟಿಗಳ ಹೆಸರಿನಲ್ಲಿ ಈ ರೀತಿ ವಂಚಿಸುವುದು ಇದೇ ಮೊದಲೇನಲ್ಲ.  ಆ ಸಾಲಿಗೆ ಗಗನ್ ಕೂಡಾ ಸೇರಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ದಿನವೇ 75 ಕೋಟಿ ಬಾಚಿಕೊಂಡ ಜವಾನ್ ಚಿತ್ರ