ಬೆಂಗಳೂರು : ಕಿರುತೆರೆ ನಟಿ ಅನಿಕಾ ಹಾಗು ಸಚಿನ್ ಅವರ ನಡುವೆ ಮದುವೆ ನಿಶ್ಚಯವಾಗಿದ್ದು, ಈಗ ಅದು ಕಾರುಣ್ಯ ರಾಮ್ ಅವರಿಂದ ಮುರಿದು ಬಿದ್ದಿದೆ ಎಂಬ ಮಾತು ಕೇಳಿಬರುತ್ತಿದೆ.
ಕಾರುಣ್ಯ ರಾಮ್ ಹಾಗೂ ಸಚಿನ್ ಅವರ ನಡುವೆ ಸಂಬಂಧವಿದೆ ಎಂದು ತಿಳಿದು ಅನಿಕಾ ಮನೆಯವರು ಈ ಮದುವೆ ನಡೆದರೆ ಮಗಳ ಜೀವನ ಹಾಳಾಗುತ್ತದೆ ಎಂಬ ಕಾರಣಕ್ಕೆ ಮದುವೆಯನ್ನು ಕ್ಯಾನ್ಸಲ್ ಮಾಡಿರುವುದಾಗಿ ಅನಿಕಾ ಅವರು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಮಾತನಾಡಿದ ಕಾರುಣ್ಯ ರಾಮ್ ಅವರು ‘9 ವರ್ಷಗಳ ಹಿಂದೆ ಸಚಿನ್ ಹಾಗು ನನಗೆ ಪರಿಚಯವಾಗಿದ್ದು ನಿಜ. ಆದರೆ ನಮ್ಮಿಬ್ಬರ ನಡುವೆ ಯಾವುದೇ ಸಂಬಂಧವಿಲ್ಲ. ಸುಮ್ಮನೆ ನನ್ನ ಈ ವಿಷಯದಲ್ಲಿ ಎಳೆಯಬೇಡಿ ಎಂದು ಹೇಳಿದ್ದಾರೆ. ಸಚಿನ್ ಅವರು ಕೂಡ ಒಮ್ಮೆ ಅನುಮಾನ ಬಂದರೆ ಮುಂದಿನ ಜೀವನದಲ್ಲಿ ನೆಮ್ಮದಿ ಇರುವುದಿಲ್ಲ ಎಂದು ಮದುವೆ ಆಗುವುದು ಬೇಡವೆಂದು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಕಾರುಣ್ಯ ರಾಮ್ ಅವರು ಈ ಹಿಂದೆ ಸಚಿನ್ ಅವರನ್ನು ಮದುವೆಯಾಗಿದ್ದು, ಅದಕ್ಕೆ ಸಂಬಂಧಿಸಿದ ಸಾಕ್ಷಿಯನ್ನು ಅನಿಕಾ ಮನೆಯವರಿಗೆ ತೋರಿಸಿದ್ದರಿಂದ ಈ ಮದುವೆ ಮುರಿದು ಬಿದ್ದಿದೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ. ಒಟ್ಟಿನಲ್ಲಿ ಹಸೆಮಣೆ ಏರಬೇಕಿದ್ದ ಅನಿಕಾ-ಸಚಿನ್ ಜೋಡಿ ಈಗ ಬೇರೆ ಬೇರೆಯಾಗಿದೆ ಎಂಬುದು ಮಾತ್ರ ಸತ್ಯ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ