ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ಅಶ್ವಿನಿ ಪುನೀತ್ ರಾಜ್‌ಕುಮಾರ್ ದಂಪತಿಯ ಹಿರಿಯ ಮಗಳು ಧೃತಿ ಅವರು ವಿದೇಶದಲ್ಲಿ ಪದವಿ ಪಡೆದಿದ್ದಾರೆ.
ಮಗಳ ಪದವಿ ಸಮಾರಂಭದಲ್ಲಿ ತಾಯಿ ಅಶ್ವಿನಿ, ಸಹೋದರಿ, ಸಹೋದರ ವಿನಯ್ ಭಾಗವಹಿಸಿದ್ದರು. ಇದೀಗ ಮಗಳ ಸಾಧನೆಯನ್ನು ದೊಡ್ಡಪ್ಪ ಶಿವರಾಜ್‌ಕುಮಾರ್ ಕೊಂಡಾಡಿದ್ದಾರೆ.
ಹಾಯ್ ಟೋಟೊ, ಕಾಂಗ್ರಾಚ್ಯುಲೇಶನ್. ಈ ದಿನ ಬಹಳ ವಿಶೇಷವಾದ ದಿನ, ನಮ್ಮೆಲ್ಲರಿಗೂ ಬಹಳ ಹೆಮ್ಮೆಯ ದಿನ. ನೀನು ನನಗೆ ತುಂಬಾ ಹೆಮ್ಮೆ ತಂದಿದ್ದೀಯಾ. ಅಪ್ಪು, ಅಶ್ವಿನಿ, ನುಕ್ಕಿ ಹಾಗೂ ನಿನ್ನೊಂದಿಗೆ ಸಾಕಷ್ಟು ಸುಂದರ ನೆನಪುಗಳಿವೆ. ನೀನು ನಗುವಾಗ, ನಡೆಯುವಾಗ ಅಪ್ಪು ಬಂದಂತೆ . ನಿನ್ನಲಿಯೇ ಅಪ್ಪು. ನಮ್ಮೆಲ್ಲರ ಪ್ರೀತಿಯ ಅಪ್ಪುಗೆ. ಪದವಿ ಪಡೆದಿದ್ದಾಗ ಮತ್ತೊಮ್ಮೆ ಶುಭಾಶಯಗಳು ಟೊಟೊ ಎಂದು ಬರೆದುಕೊಂಡಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಫಾರಿನ್‌ನಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದರು. ವಿದೇಶದಲ್ಲಿ ಓದಿ ಅವರ ವಿದ್ಯಾಭ್ಯಾಸ ಪೂರ್ಣಗೊಂಡಿದ್ದು, ಧೃತಿ ಪುನೀತ್ ರಾಜ್‌ಕುಮಾರ್ ಪದವಿಯನ್ನೂ ಪಡೆದಿದ್ದಾರೆ. ಹಾಗಾಗಿ ದೊಡ್ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮಗಳು ಪದವೀಧರೆ ಆದ ಖುಷಿಯಲ್ಲಿ ದೊಡ್ಡಪ್ಪ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ವಿಶೇಷವಾಗಿ ಸಂಭ್ರಮಿಸಿದ್ದಾರೆ.