ಕುರುಕ್ಷೇತ್ರ ಚಿತ್ರದ ಶೂಟಿಂಗ್ ಮುಗಿಸಿ ಬಂದ ನಟ ದರ್ಶನ್ ಬೇಸರದಲ್ಲಿದ್ದಾರಂತೆ!

Webdunia
ಮಂಗಳವಾರ, 16 ಜನವರಿ 2018 (06:30 IST)
ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವ ಕುರುಕ್ಷೇತ್ರ ಚಿತ್ರದ ಶೂಟಿಂಗ್ ಹೈದರಾಬಾದಿನ ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯುತ್ತಿದ್ದು, ಇತ್ತಿಚೆಗೆ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯಗೊಂಡು ದರ್ಶನ್ ಅವರು ಕರ್ನಾಟಕಕ್ಕೆ ಮರಳಿದ್ದಾರೆ. ಆದರೆ ದರ್ಶನ್ ಅವರು ಚಿತ್ರಕ್ಕೆ ಸಂಬಂಧಿಸಿದಂತೆ ಒಂದು ವಿಷಯಕ್ಕೆ ತುಂಬಾ ಬೇಸರಗೊಂಡಿದ್ದಾರೆ.


 ಅದೇನೆಂದರೆ ಹೈದರಾಬಾದ್ ನಲ್ಲಿರುವಂತೆ ಕರ್ನಾಟಕದಲ್ಲಿ ದೊಡ್ಡ ಶೂಟಿಂಗ್ ಸ್ಥಳದ ವ್ಯವಸ್ಥೆ ಇಲ್ಲದೆ ಕರ್ನಾಟಕದ ಹೊರಗೆ ಹೋಗಿ  ಶೂಟಿಂಗ್ ಮಾಡುವಂತಾಯಿತು ಎಂದು ದರ್ಶನ್ ಅವರು ಟಿವಿ ಸಂದರ್ಶನವೊಂದರಲ್ಲಿ ಬೇಸರದಿಂದ ಹೇಳಿದ್ದಾರೆ. ‘ನಮ್ಮಲ್ಲಿ ಕೆಲವೇ ಕೆಲವು ಸ್ಟುಡಿಯೋಗಳಿದ್ದು, ಅವೆಲ್ಲವನ್ನು ಟಿವಿ ಶೋಗಳು ಆರಿಸಿಕೊಂಡಿವೆ. ಜಾಗವೇ ಇಲ್ಲ.ಅಲ್ಲಿ ದೊಡ್ಡ ದೊಡ್ಡ ಸೆಟ್ ಹಾಕೋದು ಕಷ್ಟ. ಪೌರಾಣಿಕ ಸಿನಿಮಾಗಳನ್ನು ಮಾಡೋದು ಇನ್ನೂ ಕಷ್ಟ. ಕನ್ನಡ ಚಿತ್ರಗಳನ್ನು ನಿರ್ಮಾಣ ಮಾಡಲು ಬೇರೆ ರಾಜ್ಯಕ್ಕೆ ಹೋಗುವುದು ನಿಜಕ್ಕೂ ನೋವಿನ ಸಂಗತಿ. ಕನ್ನಡ ಚಿತ್ರಗಳು ಕೋಟಿ ಕೋಟಿ ವ್ಯವಹಾರ ಮಾಡುತ್ತಿದ್ದರೂ ಒಂದು ವಿಶಾಲವಾದ ಸುಸಜ್ಜಿತ ಸ್ಟುಡಿಯೋವನ್ನು ನಿರ್ಮಾಣ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ’ ಎಂದು ಅವರು ಬೇಸರಗೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಆಗಸ್ಟ್ 8ರಂದು ಟಾಕ್ಸಿಕ್ ಸಿನಿಮಾದ ಟ್ರೇಲರ್ ಲಾಂಚ್ ಬೆಂಗಳೂರಿನಲ್ಲಿ

ಈಚೆಗೆ ಆಸ್ಪತ್ರೆಗೆ ದಾಖಲಾಗಿದ್ದ ನಟ ರಾಮ್ ಚರಣ್‌ ಆರೋಗ್ಯ ಬಗ್ಗೆ ಬಿಗ್‌ ಅಪ್ಡೇಟ್‌

ಕನ್ನಡ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಆಫರ್‌ಗೆ ನೋ ಎಂದ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್

ಹುಚ್ಚು ಹುಚ್ಚರ ಥರ ಆಡುವವರಿಗೆ ಬೆಲೆ ಜಾಸ್ತಿ ಎಂದ ಧ್ರುವಂತ್‌ಗೆ ಟ್ರೋಲಿಗರ ಕಾಟ, ಠಾಣೆ ಮೆಟ್ಟಿಲೇರಿದ ಬಿಗ್‌ಬಾಸ್ ಸ್ಪರ್ಧಿ

ಸಿಂಗಲ್-ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಸೂಪರ್‌ಹೀರೋ ಚಿತ್ರ ವೀಕ್ಷಿಸಿದ್ದನ್ನು ನೆನಪಿಸಿಕೊಂಡ ರಿಷಬ್ ಶೆಟ್ಟಿ

ಮುಂದಿನ ಸುದ್ದಿ
Show comments