ನಟ ಡಾಲಿ ಧನಂಜಯ್ ಅವರು ಈಚೆಗೆ ಧನ್ಯಾತಾ ಜತೆಗಿನ ತಮ್ಮ ಮದುವೆ ವಿಷಯವನ್ನು ಅನೌನ್ಸ್ ಮಾಡಿದ್ದರು. ಈ ಹಿಂದೆ ಧನಂಜಯ್ ಅವರ ಹೆಸರು ನಟಿ ಅಮೃತಾ ಅಯ್ಯಂಗಾರ್ ಜತೆ ತಳುಕು ಹಾಕಿತ್ತು. ಕೆಲ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದ ಈ ಜೋಡಿ ಆಗಾಗ ಟಿವಿ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದರು. ಇವರಿಬ್ಬರು ಮದುವೆಯಾಗುತ್ತಾರೆಂಬ ಸುದ್ದಿಯೂ ಇತ್ತು. ಆದರೆ ಅದು ಸುಳ್ಳಾಗಿದೆ.
ಇದೀಗ ಡಾಲಿ ಧನಂಜಯ್ ಮತ್ತು ಅಮೃತಾ ಅಯ್ಯಂಗಾರ್ ಜೋಡಿ ಮತ್ತೇ ತೆರೆ ಮೇಲೆ ಕಮಾಲ್ ಮಾಡಲು ಸಜ್ಜಾಗಿದೆ. ಇವರು ನಟಿಸಿರುವ ಜಿಬ್ರಾ ಸಿನಿಮಾ ಶೂಟಿಂಗ್ ಮುಗಿಸಿದ್ದು, ನವೆಂಬರ್ 22ಕ್ಕೆ ಸಿನಿಮಾವನ್ನು ಬಿಡುಗಡೆಯಾಗಲಿದೆ. ಧನಂಜಯ್ ಅವರು ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಅಮೃತಾ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಟ್ರೇಲರ್ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಚಿತ್ರದಲ್ಲಿ ಧನಂಜಯ್ ಹಾಗೂ ಅಮೃತಾ ಒಟ್ಟಾಗಿ ಕಾಣಿಸಿಕೊಳ್ಳುತ್ತಾರಾ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡಿದೆ. ಆದರೆ ಇದಕ್ಕೆಲ್ಲ ಉತ್ತರ ಸಿನಿಮಾದ ನೋಡಿದ್ಮೇಲೆ ಅಷ್ಟೇ ಸಿಗಲಿದೆ.
ಡಾಲಿ ಧನಂಜಯ್ ಹಾಗು ಅಮೃತಾ ಅಯ್ಯಂಗಾರ್ ಅವರದ್ದು ಜನಮೆಚ್ಚಿದ ಜೋಡಿ. ಈ ಜೋಡಿ ಮೊದಲು ಪಾಪಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ನಟಿಸಿ, ನೋಡುಗರ ಮೆಚ್ಚುಗೆಯನ್ನು ಗಳಿಸಿದ್ದರು. ಬಡವ ರಾಸ್ಕಲ್ ಸಿನಿಮಾದಲ್ಲಿ ಜೋಡಿಯಾಗಿ ಅಭಿನಯಿಸಿದ್ದರು. ನಂತರ ಗುರುದೇವ ಹೊಯ್ಸಳ ಚಿತ್ರದಲ್ಲಿಯೂ ಇವರು
ಈ ಜೋಡಿ ಮತ್ತೆ ಒಂದಾಗಿದೆ. ಆ ಚಿತ್ರದ ಹೆಸರೇ ಜಿಬ್ರಾ. ಈಗಾಗಲೇ ಶೂಟಿಂಗ್ ಪೂರ್ಣಗೊಳಿಸಿರುವ ತಂಡ ನವೆಂಬರ್ 22ಕ್ಕೆ ಸಿನಿಮಾನ ರಿಲೀಸ್ ಮಾಡುತ್ತಿದೆ.