Select Your Language

Notifications

webdunia
webdunia
webdunia
webdunia

ಅಮೃತಾ ಅಯ್ಯಂಗಾರ್ ಗೆ ಪ್ರಪೋಸ್ ಮಾಡಿದ ಡಾಲಿ ಧನಂಜಯ್! ವಿಡಿಯೋ ವೈರಲ್

ಡಾಲಿ ಧನಂಜಯ್
ಬೆಂಗಳೂರು: ‘ಬಡವ ರಾಸ್ಕಲ್’ ಖ್ಯಾತಿಯ ಹಿಟ್ ಜೋಡಿ ಅಮೃತಾ ಐಯಂಗಾರ್ ಗೆ ಡಾಲಿ ಧನಂಜಯ್ ಲವ್ ಪ್ರಪೋಸ್ ಮಾಡಿದ್ದಾರೆ! ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಲವ್ ಪ್ರಪೋಸ್ ನಡೆದಿರುವುದು ಜೀ ಕನ್ನಡ ವಾಹಿನಿಯ ಗೋಲ್ಡನ್ ಸ್ಟಾರ್ ಗಣೇಶ್ ನಿರೂಪಕರಾಗಿರುವ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ. ಇಲ್ಲಿ ಗಣೇಶ್ ಹೇಳಿದ್ದಕ್ಕೆ ಈ ಜೋಡಿ ಪ್ರಪೋಸ್ ಮಾಡಿದ್ದರೂ ಇಬ್ಬರ ಮುಖ, ಹಾವಭಾವ ನೋಡಿ ನಿಜವಾಗಿಯೂ ಇವರಿಬ್ಬರ ನಡುವೆ ಸಮ್ ಥಿಂಗ್ ಇದೆ ಎಂದು ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕವಿತೆ ಸಾಲುಗಳನ್ನು ಹೇಳಿ ಅಮೃತಾಗೆ ಡಾಲಿ ನಾಚುತ್ತಲೇ ಪ್ರಪೋಸ್ ಮಾಡುತ್ತಾರೆ. ಇದನ್ನು ಸ್ವೀಕರಿಸಿದ ಬಳಿಕ ಇಬ್ಬರೂ ತಬ್ಬಿಕೊಂಡು ಜೊತೆಯಾಗಿ ಡ್ಯಾನ್ಸ್ ಮಾಡುತ್ತಾರೆ. ಈ ಸನ್ನಿವೇಶ ನೋಡಿದ ನೆಟ್ಟಿಗರು ಇದು ರೀಲ್ ಎನಿಸುತ್ತಿಲ್ಲ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಾರ್ಲಿ 777 ಸಿನಿಮಾಗೆ ಯು/ಎ ಸರ್ಟಿಫಿಕೇಟ್ ನೀಡಿದ್ದು ತಪ್ಪಾಯ್ತೇ?!