Publish Date: Fri, 30 Apr 2021 (09:32 IST)
Updated Date: Fri, 30 Apr 2021 (09:33 IST)
ಚೆನ್ನೈ : ಮಾರಿ ಸೆಲ್ವರಾಜ್ ನಿರ್ದೇಶನದ ಮತ್ತು ಕಾಲಿಪುಲಿ ಎಸ್ ಥಾನು ನಿರ್ಮಿಸಿರುವ ಧನುಷ್ ಅವರ ಚಿತ್ರ ಕರ್ಣನ್ ವಿಮರ್ಶಕರಿಂದ ಭಾರೀ ವಿಮರ್ಶೆಗಳನ್ನು ಗಳಿಸಿದೆ. ಇದು ಗಲ್ಲಾಪೆಟ್ಟಿಗೆಯಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದೆ.
ಇದೀಗ ಈ ಚಿತ್ರವನ್ನು ತೆಲುಗಿಗೆ ರಿಮೇಕ್ ಮಾಡಲು ನಿರ್ಧರಿಸಿದ್ದಾರೆ. ಜನಪ್ರಿಯ ಟಾಲಿವುಡ್ ನಿರ್ಮಾಪಕ ಬೆಲ್ಲಕೊಂಡ ಸುರೇಶ್ ಇದರ ರಿಮೇಕ್ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. ಅವರ ಪುತ್ರ ಬೆಲ್ಲಕೊಂಡ ಸಾಯಿ ಶ್ರೀನಿವಾಸ್ ಮುಖ್ಯ ಪಾತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ ಎನ್ನಲಾಗಿದೆ.
ತಮಿಳು ಕರ್ಣನ್ ಚಿತ್ರದಲ್ಲಿ ಧನುಷ್ ಅವರ ಜೊತೆ ಲಾಲ್, ನಾಟ್ಟಿ, ನಟರಾಜ್ , ರಾಜೀಶಾ ವಿಜಯನ್, ಲಕ್ಷ್ಮಿಪ್ರಿಯಾ ಚಂದ್ರಮೌಳಿ ಮತ್ತು ಯೋಗಿ ಬಾಬು ನಟಿಸಿದ್ದಾರೆ. ಇದೀಗ ತೆಲುಗಿನಲ್ಲಿ ಉಳಿದ ಪಾತ್ರವರ್ಗಗಳು ಮತ್ತು ಸಿಬ್ಬಂದಿ ವಿವರಗಳನ್ನು ಇನ್ನು ನಿಗದಿಯಾಗಿಲ್ಲ ಎನ್ನಲಾಗಿದೆ.