Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಾಶಿಗೆ ಹೋಗಲಾಗದವರು ಬೇಸರಪಡಬೇಡಿ. ಅದರ ಬದಲು ಈ ದಕ್ಷಿಣ ಕಾಶಿಗೆ ಭೇಟಿ ನೀಡಿ !

ಕಾಶಿಗೆ ಹೋಗಲಾಗದವರು ಬೇಸರಪಡಬೇಡಿ. ಅದರ ಬದಲು ಈ ದಕ್ಷಿಣ ಕಾಶಿಗೆ ಭೇಟಿ ನೀಡಿ !
ಬೆಂಗಳೂರು , ಶನಿವಾರ, 15 ಸೆಪ್ಟಂಬರ್ 2018 (15:31 IST)
ಬೆಂಗಳೂರು : ಕಾಶಿ ಉತ್ತರ ಭಾರತದಲ್ಲಿನ ಪುರಾಣ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಪಶ್ಚಿಮಾಭಿಮುಖೀಯಾಗಿ ಹರಿಯುವ ಗಂಗಾನದಿ ತೀರದಲ್ಲಿ ಕಾಶಿ ವಿಶ್ವನಾಥ ನೆಲೆಸಿದ್ದಾನೆ. ಜೀವನದಲ್ಲಿ ಒಂದು ಸಾರಿ ಇಲ್ಲಿಗೆ ಭೇಟಿ ನೀಡಿದರೆ ಜೀವನದಲ್ಲಿ ಮಾಡಿದ ಪಾಪಗಳೆಲ್ಲಾ ಕಳೆದು ಪುಣ್ಯ ಲಭಿಸಿ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನುತ್ತಾರೆ.


ಆದರೆ ಎಲ್ಲರಿಗೂ ಕಾಶಿ ವಿಶ್ವನಾಥನ ದರ್ಶನ ಪಡೆಯಲು ಸಾಧ್ಯವಾಗುವುದಿಲ್ಲ. ಅಂತವರು ಬೇಸರಪಡಬೇಡಿ. ಅದರ ಬದಲು ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಈ ದೇವಾಲಯಕ್ಕೆ ಭೇಟಿ ನೀಡಿದರೆ ಸಾಕು ಕಾಶಿಗೆ ಹೋದಷ್ಟೇ ಪುಣ್ಯ ಲಭಿಸುತ್ತದೆಯಂತೆ.
ಅದು ರೇಷ್ಮೆ ನಗರಿ ರಾಮನಗರದ ಜೀವನದಿ ಎಂದೇ ಕರೆಯುವ ಅರ್ಕಾವತಿ ನದಿ ತೀರದಲ್ಲಿರುವ  ಅರ್ಕೇಶ್ವರಸ್ವಾಮಿ ದೇವಾಲಯ. ಪಶ್ಚಿಮಾಭಿಮುಖೀಯಾಗಿ ಹರಿಯುವ ಗಂಗಾನದಿ ತೀರದಲ್ಲಿ ಕಾಶಿ ವಿಶ್ವನಾಥ ನೆಲೆಸಿದ್ದಾನೆ.


ಅದೇ ರೀತಿ ಪಶ್ಚಿಮಾಭಿಮುಖೀಯಾಗಿ ಹರಿಯುವ ಅರ್ಕಾವತಿ ನದಿ ತೀರದಲ್ಲಿ ಅರ್ಕೇಶ್ವರಸ್ವಾಮಿ ದೇವಾಲಯವಿದೆ. ಅಲ್ಲದೆ ಕಾಶಿ ದೇವಾಲಯ ಯಾವ ರೀತಿಯಲ್ಲಿ ಪಶ್ಚಿಮಾಭಿಮುಖವಾಗಿ ದೇವಾಲಯದ ದ್ವಾರವನ್ನು ಹೊಂದಿದೆಯೋ ಅದೇ ರೀತಿ ಅರ್ಕೇಶ್ವರ ದೇವಾಲಯ ಕೂಡ ಪಶ್ಚಿಮಾಭಿಮುಖವಾಗಿ ದ್ವಾರವನ್ನು ಹೊಂದಿದೆ ಹಾಗಾಗಿ ರಾಮನಗರದ ಅರ್ಕೇಶ್ವರಸ್ವಾಮಿ ದೇವಾಲಯವನ್ನು ದಕ್ಷಿಣ ಕಾಶಿ ಅಂತಲೇ ಕರೆಯಲಾಗುತ್ತದೆ.


ಈ ಅರ್ಕೆಶ್ವರ ದೇವಾಲಯವು ನಿರ್ಮಾಣವಾಗಿದ್ದು 17 ನೇ ಶತಮಾನದಲ್ಲಿ. ಅಂದಿನ ವಿಜಯನಗರದ ರಾಜ ಮನೆತನದ ತಿಮ್ಮರಸ ರಾಜ ಈ ದೇವಾಲಯವನ್ನು ಕಟ್ಟಿಸಿದರು ಎಂದು ಹೇಳಲಾಗುತ್ತದೆ. ಅಲ್ಲದೇ ಸಪ್ತ ಋಷಿಗಳು ಈ ಅರ್ಕೆಶ್ವರಸ್ವಾಮಿ ದೇವಸ್ಥಾನವನ್ನು ಪ್ರತಿಷ್ಟಾಪಿಸಿ ಪೂಜೆ ಸಲ್ಲಿಸುತ್ತಿದ್ದರು ಎಂಬ ಐತಿಹ್ಯವಿದೆ. ಇಲ್ಲಿ ನಡೆಯುವ ಪೂಜೆ, ಪುನಸ್ಕಾರ, ಅಭಿಷೇಕವೆಲ್ಲಾ ಕಾಶಿಯ ವಿಶ್ವನಾಥನ ಸನ್ನಿಧಿಯಲ್ಲಿ ನಡೆಯುವಂತೆ ನಡೆಯುತ್ತದೆ. ಆದ್ದರಿಂದ ಕಾಶಿಗೆ ಹೋಗಲು ಸಾಧ್ಯವಾಗದವರು ಒಮ್ಮೆ ಈ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಿರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಯಾವುದೇ ಕಾರಣಕ್ಕೂ ಗಣೇಶ ಮೂರ್ತಿಯ ಈ ಭಾಗವನ್ನು ಮಾತ್ರ ದರ್ಶಿಸಬೇಡಿ