ಹೈದರಾಬಾದ್ : ಡಾರ್ಲಿಂಗ್ ಪ್ರಭಾಸ್ ಬ್ಯಾಕ್ ಟು ಬ್ಯಾಕ್ ಚಿತ್ರವನ್ನು ಫೋಷಿಸಿ ಅಭಿಮಾನಿಗಳಿಗೆ ಆಶ್ಚರ್ಯವನ್ನು ನೀಡಿದ್ದಾರೆ.
ಆದಿಪುರುಷ 3ಡಿ, ಸಲಾರ್ ಚಿತ್ರಗಳ ಜೊತೆಗೆ ನಾಗ್ ಅಶ್ವಿನ್ ನಿರ್ದೇಶನದ ಬೃಹತ್ ಚಲನಚಿತ್ರವನ್ನು ಪ್ರಕಟಿಸಿದೆ. ಅಶ್ವಿನಿ ದತ್- ನಾಗ್ ಅಶ್ವಿನ್ ತಂಡವು ಇದನ್ನು ಪ್ಯಾನ್ ಇಂಡಿಯಾ ಚಲನಚಿತ್ರವಾಗಿ ಅನೇಕ ಭಾಷೆಗಳಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.
ನಿರ್ದೇಶಕ ನಾಗ್ ಅಶ್ವಿನ್ ಇತ್ತೀಚೆಗೆ ಈ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದು, ಮುಂದಿನ ವರ್ಷದ 2022ರಲ್ಲಿ ಚಲನಚಿತ್ರ ಬಿಡುಗಡೆಯಗಲಿದೆ ಎಂದು ತಿಳಿಸಿದ್ದಾರೆ. ಚಿತ್ರವನ್ನು ಪ್ರತಿಷ್ಠಿತ ವೈಜಯಂತಿ ಮೂವೀಸ್ ಬ್ಯಾನರ್ ನಿರ್ಮಿಸುತ್ತಿದೆ.