ಚೆನ್ನೈ : ಲೋಕೇಶ್ ಕನಗರಾಜ್ ಅವರ ನಿರ್ದೇಶನದ ನಟ ವಿಜಯ್ ಅಭಿನಯದ ಮಾಸ್ಟರ್ ಚಿತ್ರ ಜನವರಿ 13ರಂದು ಬಿಡುಗಡೆಯಾಗಿತ್ತು.
ಈ ಚಿತ್ರಕ್ಕೆ ತಮಿಳುನಾಡು ಮಾತ್ರವಲ್ಲದೇ ಇತರ ರಾಜ್ಯಗಳಿಂದಲೂ ಉತ್ತಮ ವಿಮರ್ಶೆಗಳನ್ನು ಪಡೆದಿದೆ. ಈ ಚಿತ್ರದ ಬಿಡುಗಡೆಯ ಮೊದಲ ದಿನ ತಮಿಳುನಾಡಿನಲ್ಲಿ 25ಕೋಟಿಗಿಂತಲೂ ಅಧಿಕ ಹಣ ಸಂಗ್ರಹವಾಗಿದೆ ಎನ್ನಲಾಗಿದೆ. ಹಾಗೇ ಎರಡನೇ ದಿನ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 3.25ಕೋಟಿ ರೂ.ಗಳನ್ನು ಸಂಗ್ರಹಿಸಿದೆ ಎನ್ನಲಾಗಿದೆ.