ಬೆಂಗಳೂರು: ಲಾಕ್ ಡೌನ್ ಬಳಿಕ ಥಿಯೇಟರ್ ತೆರೆದ ಮೇಲೆ ಈಗ ಸ್ಟಾರ್ ನಟರ ಸಾಲು ಸಾಲು ಸಿನಿಮಾಗಳು ಬಿಡುಗಡೆಗಾಗಿ ಕಾದುಕೂತಿವೆ. ಎಲ್ಲಾ ಸಿನಿಮಾಗಳು ಒಂದೇ ಸಮಯಕ್ಕೆ ಬಿಡುಗಡೆಯಾದರೆ ಸ್ಟಾರ್ ವಾರ್ ಆಗೋದು ಖಂಡಿತಾ.
ಇದರಿಂದ ನಿರ್ಮಾಪಕರ ಜೇಬಿಗೂ ನಷ್ಟ. ಮೊದಲೇ ಶೇ. 50 ಪ್ರೇಕ್ಷಕರಿಗೆ ಮಾತ್ರ ಅನುಮತಿ ನೀಡಲಾಗಿದೆ. ಅದರ ಮೇಲೂ ಒಂದೇ ಸಮಯಕ್ಕೆ ಸ್ಟಾರ್ ಸಿನಿಮಾಗಳು ಬಿಡುಗಡೆಯಾದರೆ ಆರ್ಥಿಕವಾಗಿ ಹೊಡೆತ ಬೀಳೋದು ಗ್ಯಾರಂಟಿ. ಹೀಗಾಗಿ ನಿರ್ಮಾಪಕರ ಸಂಘ ಪ್ರತ್ಯೇಕ ಸಮಿತಿ ರಚನೆ ಮಾಡಿದ್ದು, ಒಮ್ಮತದಿಂದ ಡೇಟ್ ಕ್ಲ್ಯಾಶ್ ಆಗದಂತೆ ಸ್ಟಾರ್ ಸಿನಿಮಾಗಳನ್ನು ಬಿಡುಗಡೆ ಮಾಡಲು ತಂತ್ರ ಹೆಣೆದಿದೆ. ಎಲ್ಲಾ ನಿರ್ಮಾಪಕರೂ ಈಗಾಗಲೇ ಒಂದು ಸುತ್ತಿನ ಮಾತುಕತೆಯನ್ನೂ ಮಾಡಿದ್ದಾರೆ. ಯಾರ ಸಿನಿಮಾಗೂ ತೊಂದರೆಯಾಗದಂತೆ ಎಲ್ಲಾ ನಿರ್ಮಾಪಕರೂ ಸಹಕಾರ ನೀಡಿ ಸಿನಿಮಾ ಬಿಡುಗಡೆ ಮಾಡಿದರೆ ಚಿತ್ರರಂಗಕ್ಕೂ ಲಾಭ, ಸ್ಟಾರ್ ವಾರ್ ಗಳಗಾದಂತೆಯೂ ತಡೆಯಬಹುದು.