ಚೆನ್ನೈ : ನಟಿ ಶೃತಿ ಹಾಸನ್ ಅವರು ಬ್ರೇಕ್ ಅಪ್ ನೋವಿನಿಂದ ಹೊರಬಂದ ಬಗೆ ವಿವರಿಸುವುದರ ಮೂಲಕ ತಮ್ಮ ವೈಯಕ್ತಿಕ ವಿಷಯದ ಬಗ್ಗೆ ಮಾತನಾಡಿದ್ದಾರೆ.
ಹೌದು. ನಟಿ ಶೃತಿ ಹಾಸನ್ ಸಂಗೀತಗಾರ ಮೈಕಲ್ ಕೋರ್ಸೆಲ್ ನನ್ನು ಪ್ರೀತಿಸುತ್ತಿದ್ದರು. ತಮ್ಮ ಪ್ರಿಯತಮನ ಜೊತೆಗಿರುವ ಫೋಟೊಗಳನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಬಳಿಕ ಇವರಿಬ್ಬರ ನಡುವೆ ಬ್ರೇಕ್ ಅಪ್ ಆಗಿದ್ದು, ಆ ವೇಳ ಅವರು ಅನುಭವಿಸಿದ್ದ ನೋವು ಸಂಕಟವನ್ನು ಹೊರಹಾಕಿದ್ದಾರೆ.
ಈ ಬಗ್ಗೆ ನಟಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಒಂಟಿತನದಿಂದ ತತ್ತರಿಸಿ ಹೋದ ಅವರು ಮದ್ಯದ ದಾಸರಾಗಿದ್ದರಂತೆ, ಬಳಿಕ ಲಾಕ್ ಡೌನ್ ವೇಳೆ ಒಂಟಿತನದ ಬಗ್ಗೆ ಬೇಸರ ದೂರವಾಗಿದೆ. ಎಂದು ಹೇಳಿದ್ದಾರೆ.