ಬೆಂಗಳೂರು: ಒಮಿಕ್ರಾನ್ ನಿಯಂತ್ರಿಸಲು ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದ್ದು, ಈ ವೇಳೆ ಗೆಳೆಯರ ಜೊತೆ ಪಾರ್ಟಿ ಮಾಡಿ ಬರುತ್ತಿದ್ದ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಪೊಲೀಸರ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ.
ರಾತ್ರಿ 10 ಗಂಟೆ ಬಳಿಕ ಚರ್ಚ್ ಸ್ಟ್ರೀಟ್ ನಲ್ಲಿ ಬಾರ್, ಪಬ್ ಗಳನ್ನು ಪೊಲೀಸರು ಮುಚ್ಚಿಸುತ್ತಿದ್ದರು. ಈ ವೇಳೆ ಗೆಳೆಯನ ಜೊತೆ ಬಂದಿದ್ದ ದಿವ್ಯಾ ಸುರೇಶ್ ರನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಕಿರಿಕ್ ನಡೆದಿದೆ.
ಇದನ್ನು ಮಾಧ್ಯಮಗಳು ಸೆರೆಹಿಡಿಯಲು ಪ್ರಯತ್ನಿಸಿದಾಗ ದಿವ್ಯಾ ಗೆಳೆಯ ಕ್ಯಾಮರಾ ಕಸಿಯಲು ಯತ್ನಿಸಿದ್ದಾನೆ. ಈ ವೇಳೆ ನಟಿಗೆ ಪೊಲೀಸರು ಎಚ್ಚರಿಕೆ ನೀಡಿದರು. ಬಳಿಕ ಬುಕ್ ಮಾಡಿದ ಕ್ಯಾಬ್ ನಲ್ಲಿ ದಿವ್ಯಾ ಸುರೇಶ್ ತೆರಳಿದ್ದಾರೆ.