ಚೆನ್ನೈ : ನಿರ್ದೇಶಕ ಎಸ್.ಪಿ.ಜಾನಂತನ್ ಅವರನ್ನು ಚೆನ್ನೈನ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
ನಿರ್ದೇಶಕ ಎಸ್.ಪಿ.ಜಾನಂತನ್ ಅವರು ವಿಜಯ್ ಸೇತುಪತಿ ಅಭಿನಯದ ಮುಂಬರುವ ಲಾಬಾಮ್ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದರು. ಊಟಕ್ಕೆಂದು ಮನೆಗೆ ಹೋಗಿದ್ದವರು ತಮ್ಮ ರೂಂನಲ್ಲಿ ಪ್ರಜ್ಞಾ ಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಮೆದುಳು ಸ್ಥಗಿತಗೊಂಡಿದ್ದು, ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.