ಬೆಂಗಳೂರು : ದೇಶದ ಪ್ರಧಾನಿ ಸ್ಥಾನವನ್ನು ಅಲಂಕರಿಸಿ ದೇಶವನ್ನು ಅಭಿವೃದ್ಧಿ ಪತದತ್ತ ಕೊಂಡೊಯ್ಯುತ್ತಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧಾರಿತ ಚಿತ್ರವನ್ನು ಕನ್ನಡದಲ್ಲಿ ಮಾಡಲು ನಿರ್ದೇಶಕಿ ರೂಪಾ ಅಯ್ಯರ್ ಅವರು ಮುಂದಾಗಿದ್ದಾರೆ.
ನಿರ್ದೇಶಕಿ ರೂಪಾ ಅಯ್ಯರ್ ಅವರು ಸಿನಿಮಾ ರಂಗ ಬಿಟ್ಟು ಉಪೇಂದ್ರ ಅವರ ಕೆಪಿಜೆಪಿ ಪಕ್ಷದ ಕಾರ್ಯಗಳಲ್ಲಿ ತೊಡಗಿದ್ದು ಇದೀಗ ಮೋದಿ ಅವರ ಜೀವನಾಧಾರಿತ ಚಿತ್ರವನ್ನು ಮಾಡುವ ಮೂಲಕ ಮತ್ತೆ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ. ಮೋದಿ ಅವರ ಜೀವನ ಚರಿತ್ರೆಯನ್ನ ಸಂಶೋಧನೆ ಮಾಡಿರುವ ರೂಪಾ ಅಯ್ಯರ್ ಅವರು ಚಿತ್ರಕ್ಕೆ ‘ನಮೋ’ ಎಂದು ಟೈಟಲ್ ಇಟ್ಟು ಸ್ಕ್ರಿಪ್ಟ್ ಕೂಡ ರೆಡಿಮಾಡಿಕೊಂಡಿದ್ದಾರಂತೆ. ಈ ಚಿತ್ರವನ್ನು ಅವರ ಸ್ನೇಹಿತರಾದ ಗಾಯತ್ರಿ ರವಿ ಎಂಬುವವರು ನಿರ್ಮಾಣ ಮಾಡಲಿದ್ದು, ಈ ಚಿತ್ರ ಕನ್ನಡದಲ್ಲಿ ಮಾತ್ರವಲ್ಲದೆ ಹಿಂದಿಯಲ್ಲೂ ಕೂಡ ನಿರ್ಮಾಣವಾಗಲಿದೆಯಂತೆ. ಈ ಸಿನಿಮಾಕ್ಕೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿಗಳನ್ನು ಸದ್ಯದಲ್ಲೇ ಸುದ್ದಿಗೋಷ್ಠಿ ನಡೆಸಿ ಬಹಿರಂಗಪಡಿಸುವುದಾಗಿ ನಿರ್ದೇಶಕಿ ರೂಪಾ ಅಯ್ಯರ್ ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ