ಮುಂಬೈ : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣ್‍ವೀರ್ ಸಿಂಗ್ ಅವರು ಯಾವಾಗ ಮದುವೆಯಾಗುತ್ತಾರೆ ಎಂದು ಆತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೊಂದು ಸಿಹಿಸುದ್ದಿ. ಅದೇನೆಂದರೆ ಇನ್ನೂ 3-4 ತಿಂಗಳಲ್ಲಿ ದೀಪಿಕಾ ಹಾಗೂ ರಣ್‍ವೀರ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆಂತೆ.
ದೀಪಿಕಾ ಹಾಗೂ ರಣ್‍ವೀರ್ ಅವರು ಡೆಸ್ಟೀನೇಶನ್ ವೆಡ್ಡಿಂಗ್ ಮಾಡಿಕೊಳ್ಳಲಿದ್ದು, ಇವರ ಮದುವೆ ಮುಂಬೈನಲ್ಲಿ ನಡೆಯುವುದಾಗಿ ರಣ್‍ವೀರ್ ಕುಟುಂಬದವರು ತಿಳಿಸಿದ್ದಾರೆ. ದೀಪಿಕಾ ಅವರ ಪೋಷಕರು ಮುಂಬೈನಲ್ಲಿರುವ ರಣ್‍ವೀರ್ ಅವರ ಮನೆಗೆ ಭೇಟಿ ನೀಡಿ ಮದುವೆ ದಿನಾಂಕವನ್ನು ನಿಗದಿಪಡಿಸಿದ್ದಾರೆ. ದೀಪಿಕಾ ಅವರು ರಣ್‍ವೀರ್ ಕುಟುಂಬದವರ ಜೊತೆ ಲಂಡನ್ ನಲ್ಲಿ ಮದುವೆಯ ಶಾಪಿಂಗ್ ಕೂಡ ಮಾಡುತ್ತಿದ್ದಾರಂತೆ. ಇವರ ಮದುವೆ ವಿಧಾನವು ದಕ್ಷಿಣ ಭಾರತದ ಸಂಪ್ರದಾಯದಂತೆ ನಡೆಯಲಿದೆಯಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ