Publish Date: Mon, 14 Jun 2021 (10:00 IST)
Updated Date: Mon, 14 Jun 2021 (10:02 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಲಾಕ್ ಡೌನ್ ವೇಳೆ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಪೊಗರು ಸಿನಿಮಾಗಾಗಿ ಫುಲ್ ದಾಡಿ, ಕೂದಲು ಬೆಳೆಸಿಕೊಂಡಿದ್ದ ಧ್ರುವ ಬಳಿಕ ತಕ್ಕ ಮಟ್ಟಿಗೆ ಕೂದಲಿಗೆ ಕತ್ತರಿ ಹಾಕಿದ್ದರು. ಆದರೆ ಇದೀಗ ಲಾಕ್ ಡೌನ್ ವೇಳೆ ಸಂಪೂರ್ಣವಾಗಿ ಕೂದಲಿಗೆ ಕತ್ತರಿ ಹಾಕಿದ್ದು, ಸಣ್ಣ ಹುಡುಗನಂತಾಗಿದ್ದಾರೆ.
ನಿನ್ನೆ ನಿರ್ದೇಶಕ ಚೇತನ್ ಕುಮಾರ್ ಮದುವೆ ಕಾರ್ಯಕ್ರಮದಲ್ಲಿ ಪತ್ನಿ ಪ್ರೇರಣಾ ಶಂಕರ್ ಜೊತೆ ಭಾಗಿಯಾಗಿದ್ದ ಧ‍್ರುವ ಆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಈ ವೇಳೆ ಧ್ರುವ ಹೊಸ ಲುಕ್ ಎಲ್ಲರ ಗಮನ ಸೆಳೆದಿದೆ. ಈಗಾಗಲೇ ದುಬಾರಿ ಸಿನಿಮಾ ಮುಂದಕ್ಕೆ ಹೋಗಿದೆ. ಹಾಗಿದ್ದರೆ ಧ್ರುವ ಈ ಹೊಸ ಲುಕ್ ಮಾಡಿಕೊಂಡಿರುವುದು ಯಾಕೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.