Publish Date: Thu, 30 Apr 2020 (09:45 IST)
Updated Date: Thu, 30 Apr 2020 (09:47 IST)
ಬೆಂಗಳೂರು: ಲಾಕ್ ಡೌನ್ ನಿಂದಾಗಿ ಯಾವ ದಿನವೂ ಜನರಿಗೆ ವಿಶೇಷವೆನಿಸುತ್ತಿಲ್ಲ. ಒಂದು ರೀತಿಯ ಬೇಸರದಲ್ಲಿರುವ ಜನರಿಗೆ ಖುಷಿಕೊಡಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರತಂಡ ನಿರ್ಧರಿಸಿದೆ.
ಎಲ್ಲಾ ಸರಿ ಹೋಗಿದ್ದರೆ ರಾಬರ್ಟ್ ಈಗಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ ಲಾಕ್ ಡೌನ್ ನಿಂದಾಗಿ ಸಿನಿಮಾ ಬಿಡುಗಡೆಯಾಗಿಲ್ಲ. ಹೀಗಾಗಿ ಅಭಿಮಾನಿಗಳಿಗೆ ಬೇಸರವಾಗದೇ ಇರಲು ಮೇ ಡೇ ದಿನ ಅಂದರೆ ನಾಳೆ ರಾಬರ್ಟ್ ಸಿನಿಮಾ ಚಿತ್ರೀಕರಣದ ತೆರೆ ಹಿಂದಿನ ದೃಶ್ಯಗಳ ವಿಡಿಯೋವನ್ನು ಬಿಡುಗಡೆ ಮಾಡಲು ನಿರ್ದೇಶಕ ತರುಣ್ ಸುಧೀರ್ ನಿರ್ಧರಿಸಿದ್ದಾರೆ.
ನಾಳೆ ಬೆಳಿಗ್ಗೆ 10.05 ಕ್ಕೆ ಉಮಾಪತಿ ಫಿಲಂಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ರಾಬರ್ಟ್ ತೆರೆ ಹಿಂದಿನ ದೃಶ್ಯಗಳ ವಿಡಿಯೋ ಲಾಂಚ್ ಆಗಲಿದೆ. ಇದು ದರ್ಶನ್ ಅಭಿಮಾನಿಗಳಿಗೆ ರಸದೌತಣ ನೀಡಲಿದೆ.