Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮನೆ ಊಟ ಕೋರಿದ ದರ್ಶನ್: ಹೈಕೋರ್ಟ್‌ನಲ್ಲಿ ಇಂದು ಅರ್ಜಿ ವಿಚಾರಣೆ

ಮನೆ ಊಟ ಕೋರಿದ ದರ್ಶನ್: ಹೈಕೋರ್ಟ್‌ನಲ್ಲಿ ಇಂದು ಅರ್ಜಿ ವಿಚಾರಣೆ

Sampriya

ಬೆಂಗಳೂರು , ಸೋಮವಾರ, 29 ಜುಲೈ 2024 (09:56 IST)
ಬೆಂಗಳೂರು: ಐಷರಾಮಿ ಜೀವನ ನಡೆಸಿದ್ದ ನಟ ದರ್ಶನ್ ಅವರು ಇದೀಗ ಜೈಲಿನಲ್ಲಿ ಮನೆಯೂಟ ತರಿಸಿಕೊಳ್ಳುವಂತೆ  ಅನುಮತಿ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಹೈಕೋರ್ಟ್‌ನಲ್ಲಿ  ನಡೆಯಲಿದೆ.

ಜುಲೈ 25ರಂದು ಮನೆಯೂಟ, ಹಾಸಿಗೆ, ಪುಸ್ತಕಗಳಿಗೆ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಮ್ಯಾಜಿಸ್ಟ್ರೇಟ್‌ ಕೋರ್ಟ್ ವಜಾ ಮಾಡಿತ್ತು. ಈ ಹಿನ್ನೆಲೆ ದರ್ಶನ್ ಪರ ವಕೀಲರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇಂದು ಅದರ ಅರ್ಜಿ ವಿಚಾರಣೆ ನಡೆಯಲಿದ್ದು ತೀರ್ಪಿನಲ್ಲಿ  ಮನೆಯೂಟ ಸಿಗುವ ಭಾಗ್ಯ ಇದೆಯಾ ಎಂದು ಕಾದು ನೋಡಬೇಕಿದೆ.

ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಅರ್ಜಿ ವಜಾ ಮಾಡಿದ್ದಕ್ಕೆ ಕಾರಣ ಹೀಗಿದೆ:

ಜೈಲು ನಿಯಮಾವಳಿ 728ರಲ್ಲಿ ಕೊಲೆ ಆರೋಪಿಗಳಿಗೆ ಮನೆಯ ಊಟ, ಬಟ್ಟೆ, ಹಾಸಿಗೆ ಪಡೆಯಲು ಅವಕಾಶವಿಲ್ಲ. ದರ್ಶನ್ ಕೊಲೆ ಆರೋಪಿ. ಆದ್ದರಿಂದ ಅವರಿಗೆ ಈ ಸೌಲಭ್ಯವನ್ನು ನೀಡಲಾಗುವುದಿಲ್ಲ ಎಂದು ಹೇಳಲಾಗಿದೆ.‌

ಕಾನೂನಿಗೆ ಎಲ್ಲರೂ ಒಂದೇ, ಕೈದಿಗಳಲ್ಲಿ ಯಾವುದೇ ಭೇದವಿಲ್ಲ. ಆಸ್ತಿ ಅಂತಸ್ತು ನೋಡಿ ಜೈಲಿನಲ್ಲಿ ಸೌಕರ್ಯ ನೀಡಲು ಸಾಧ್ಯವಿಲ್ಲ. ಅಗತ್ಯವಿದ್ದಾಗ ಮಾತ್ರ ವಿಚಾರಣಾಧೀನ ಕೈದಿಗಳಿಗೆ ಮನೆಯೂಟ ನೀಡಬಹುದು. ಆದರೆ ಕೊಲೆ ಪ್ರಕರಣದ ಆರೋಪಿಗಳಿಗೆ ಇದು ಅನ್ವಯಿಸುವುದಿಲ್ಲ.

ಎಲ್ಲರಿಗೂ ನೀಡುವ ಆಹಾರವನ್ನೇ ದರ್ಶನ್‌ಗೆ ನೀಡಲಾಗುತ್ತಿದೆ. ಯಾವ ವಿಚಾರದಲ್ಲೂ ಮೂಲಭೂತ ಹಕ್ಕಿಗೆ ಧಕ್ಕೆ ಕಂಡು ಬಂದಿಲ್ಲ. ಜೈಲಿನ ಊಟ ಕಳಪೆ ಗುಣಮಟ್ಟ ಎಂಬ ಆರೋಪ ಕೇಳಿಬಂದಿಲ್ಲ. ದರ್ಶನ್‌ಗೆ ಜೈಲಿನಲ್ಲಿ ಮೂಲಭೂತ ಸೌಕರ್ಯ ಒದಗಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಟಂ ಸಾಂಗ್‌ನ ರಿಹರ್ಸಲ್ ವಿಡಿಯೋ ಹಂಚಿದ 'ಕಾವಾಲಯ್ಯ'ನಟಿ: ಬೆಂಕಿ ಎಂದಾ ನೆಟ್ಟಿಗರು