Publish Date: Sun, 25 Jul 2021 (09:50 IST)
Updated Date: Sun, 25 Jul 2021 (09:52 IST)
ಬೆಂಗಳೂರು: ಇತ್ತೀಚೆಗೆ ಸಾಕಷ್ಟು ವಿವಾದಗಳಿಂದ ಹೈರಾಣಾಗಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಸಂಕಟ ನಿವಾರಣೆಗೆ ದೇವರ ಮೊರೆ ಹೋಗಿದ್ದಾರೆ.
ಸ್ನೇಹಿತರೊಂದಿಗೆ ತಮಿಳುನಾಡಿನ ತಿರುನಲ್ಲಾರ್ ಶನಿ ದೇವಾಲಯಕ್ಕೆ ಭೇಟಿ ನೀಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪೂಜೆ ಸಲ್ಲಿಸಿ ತಮಗೆ ಬಂದಿರುವ ಸಂಕಟ ದೂರ ಮಾಡುವಂತೆ ಪ್ರಾರ್ಥನೆ ಮಾಡಿದ್ದಾರೆ.
ಇತ್ತೀಚೆಗೆ ನಿರ್ಮಾಪಕ ಉಮಾಪತಿ ಗೌಡ ಜೊತೆ ವೈಮನಸ್ಯ, 25 ಕೋಟಿ ರೂ. ಸಾಲ ವಂಚನೆ, ಇಂದ್ರಜಿತ್ ಲಂಕೇಶ್ ರ ಹಲ್ಲೆ ಆರೋಪದಿಂದಾಗಿ ದರ್ಶನ್ ಹೈರಾಣಾಗಿದ್ದರು. ಇದೀಗ ಮನಸ್ಸಿನ ನೆಮ್ಮದಿಗಾಗಿ ದೇವರ ಮೊರೆ ಹೋಗಿದ್ದಾರೆ.