Publish Date: Sat, 11 Apr 2020 (09:51 IST)
Updated Date: Sat, 11 Apr 2020 (09:53 IST)
ಬೆಂಗಳೂರು: ಲಾಕ್ ಡೌನ್ ವೇಳೆ ಅತೀ ಹೆಚ್ಚು ಸಂಕಷ್ಟಕ್ಕೀಡಾದವರು ರೈತರು. ರೈತರಿಗೆ ಬೆಳೆದ ಬೆಳೆಗಳನ್ನು ಮಾರಲು ಮಾರುಕಟ್ಟೆ ಸಿಗದೇ ಪರದಾಡುತ್ತಿದ್ದಾರೆ. ಇದೀಗ ಈ ರೈತರಿಗೆ ನೆರವಾಗಲು ಡಿ ಬಾಸ್ ದರ್ಶನ್ ತೀರ್ಮಾನಿಸಿದ್ದಾರೆ.
ಈಗಾಗಲೇ ಪ್ರತಿನಿತ್ಯ ಬಡವರಿಗೆ ಊಟೋಪಚಾರದ ವ್ಯವಸ್ಥೆ ಮಾಡುತ್ತಿರುವ ದರ್ಶನ್, ರೈತರು ತಾವು ಬೆಳೆದ ತರಕಾರಿ, ಹಣ್ಣು ಹಂಪಲುಗಳನ್ನು ತಾವೇ ಖರೀದಿಸಿ ಮನೆ ಮನೆಗೆ ಅಭಿಮಾನಿಗಳ ಮೂಲಕ ಮಾರಾಟ ಮಾಡುವ ಯೋಜನೆ ಮಾಡಿದ್ದಾರೆ.
ಇದರಿಂದ ಮಧ್ಯವರ್ತಿಗಳ ಸಹಾಯವಿಲ್ಲದೇ ರೈತರಿಗೆ ತಾವು ಬೆಳೆದ ಬೆಲೆಗೆ ಕನಿಷ್ಠ ಬೆಲೆಯಾದರೂ ಸಿಕ್ಕಿ ನಷ್ಟವಾಗದಂತೆ ನೋಡಿಕೊಳ್ಳಬಹುದು ಎಂಬುದು ದರ್ಶನ್ ಯೋಜನೆ.