Publish Date: Thu, 28 Mar 2019 (09:45 IST)
Updated Date: Thu, 28 Mar 2019 (09:47 IST)
ಬೆಂಗಳೂರು: ತಮ್ಮನ್ನು ಡಿ ಬಾಸ್ ಎಂದು ಕರೆಯುವುದಕ್ಕೆ ವ್ಯಂಗ್ಯವಾಡಿದ ಸಿಎಂ ಕುಮಾರಸ್ವಾಮಿಗೆ ನಟ ದರ್ಶನ್ ಸೌಮ್ಯವಾಗಿಯೇ ತಿರುಗೇಟು ನೀಡಿದ್ದಾರೆ.
ಸುಮಲತಾ ಅಂಬರೀಶ್ ಪರ ಮಂಡ್ಯ ಲೋಕಸಭಾ ಕಣದಲ್ಲಿ ಪ್ರಚಾರ ನಡೆಸುತ್ತಿರುವ ದರ್ಶನ್ ಬಗ್ಗೆ ಸಿಎಂ ಕುಮಾರಸ್ವಾಮಿ ಲೇವಡಿ ಮಾಡಿದ್ದರು. ಡಿ ಬಾಸ್ ಎಂಬುದು ಸಿನಿಮಾದಲ್ಲಿ ಮಾತ್ರ ಲಾಯಕ್ಕು. ನಿಜ ಜೀವನದಲ್ಲಿ ಇವರು ಬಾಸ್ ಆಗಲ್ಲ ಎಂದಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ದರ್ಶನ್ ‘ಡಿ ಬಾಸ್ ಎನ್ನುವುದು ಅಭಿಮಾನಿಗಳು ನೀಡಿದ ಭಿಕ್ಷೆ. ಬೇರೆ ಯಾರೂ ಅಲ್ಲ’ ಎಂದಿದ್ದಾರೆ. ಅಷ್ಟೇ ಅಲ್ಲ, ನಾನು ಈ ಮೊದಲೇ ಹೇಳಿದಂತೆ ಚುನಾವಣೆ ಸಂದರ್ಭದಲ್ಲಿ ಬರುವ ಇಂತಹ ಟೀಕೆಗಳಿಗೆ ನಾನು ಕೋಪ ಮಾಡಿಕೊಳ್ಳುವುದಿಲ್ಲ. ಯಾರೊಂದಿಗೂ ನೋವು ತೋಡಿಕೊಳ್ಳಲ್ಲ. ಅಭಿಮಾನಿಗಳೂ ಅಷ್ಟೇ ಇಂತಹ ವಿಚಾರಗಳನ್ನು ದೊಡ್ಡದು ಮಾಡಿ ಅವರ ವಿರುದ್ಧ ಫೋಟೋ, ವಿಡಿಯೋ ಹಾಕಬೇಡಿ. ಶಾಂತಿ ಕಾಪಾಡೋಣ ಎಂದು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ