Publish Date: Tue, 21 Sep 2021 (09:01 IST)
Updated Date: Tue, 21 Sep 2021 (09:02 IST)
ಬೆಂಗಳೂರು: ಯಜಮಾನ ಸಿನಿಮಾದಲ್ಲಿನ ಅಭಿನಯಕ್ಕಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆದ್ದಿದ್ದ ಸೈಮಾ ಅವಾರ್ಡ್ ಇದೀಗ ಅವರ ಕೈ ಸೇರಿದೆ.
ದರ್ಶನ್ ಪ್ರಶಸ್ತಿ ಸಮಾರಂಭಗಳಿಗೆ ಸಾಮಾನ್ಯವಾಗಿ ಹಾಜರಾಗುವುದಿಲ್ಲ. ಈಗ ಸೈಮಾ ಅವಾರ್ಡ್ ಸಮಾರಂಭದಲ್ಲೂ ದರ್ಶನ್ ಉಪಸ್ಥಿತರಲಿಲ್ಲ. ಅವರ ಬದಲಾಗಿ ನಿರ್ಮಾಪಕಿ ಶೈಲಜಾ ನಾಗ್ ಪ್ರಶಸ್ತಿ ಸ್ವೀಕರಿಸಿದ್ದರು.
ಇದೀಗ ಶೈಲಜಾ ನಾಗ್ ಡಿ ಬಾಸ್ ನಿವಾಸಕ್ಕೆ ತೆರಳಿ ಸೈಮಾ ಪ್ರಶಸ್ತಿಯನ್ನು ಅವರ ಕೈಗೊಪ್ಪಿಸಿದ್ದಾರೆ. ಈ ಬಾರಿಯ ಸೈಮಾ ಅವಾರ್ಡ್ ಸಮಾರಂಭದಲ್ಲಿ ಯಜಮಾನ ಸಿನಿಮಾ ಒಟ್ಟು 8 ವಿಭಾಗಗಳಲ್ಲಿ ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು.