Publish Date: Mon, 27 Sep 2021 (10:27 IST)
Updated Date: Mon, 27 Sep 2021 (10:31 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರಿನ ಕ್ರೇಜ್ ಬಗ್ಗೆ ಅಭಿಮಾನಿಗಳಿಗೆಲ್ಲರಿಗೂ ಗೊತ್ತೇ ಇದೆ. ಹೊಸ ಮಾದರಿಯ ಕಾರುಗಳನ್ನು ಖರೀದಿಸುವುದು ದರ್ಶನ್ ಮೆಚ್ಚಿನ ಹವ್ಯಾಸಗಳಲ್ಲೊಂದು.
ಇದೀಗ ಅವರ ಮನೆಗೆ ಮತ್ತೊಂದು ದುಬಾರಿ ಕಾರು ಸೇರ್ಪಡೆಯಾಗಿದೆ. ದರ್ಶನ್ ಇದೀಗ ಫೋರ್ಡ್ ಎಂಡೀವರ್ ಕಾರು ಖರೀದಿಸಿದ್ದಾರೆ. ದರ್ಶನ್ ಮನೆಯೆದುರು ಪಾರ್ಕ್ ಮಾಡಿದ್ದ ಕಾರು ಈಗ ಎಲ್ಲರ ಆಕರ್ಷಣೆ ಕೇಂದ್ರ ಬಿಂದುವಾಗಿದೆ.
ಈ ದುಬಾರಿ ಕಾರಿನ ಬೆಲೆ 35 ಲಕ್ಷಕ್ಕೂ ಅಧಿಕ. ಈಗಾಗಲೇ ಲ್ಯಾಂಬೋರ್ಗಿನಿ ಸೇರಿದಂತೆ ಹಲವು ಐಷಾರಾಮಿ ಕಾರುಗಳು ದರ್ಶನ್ ಮನೆಯಲ್ಲಿದೆ. ಇದೀಗ ಅದಕ್ಕೆ ಹೊಸ ಸೇರ್ಪಡೆಯಾಗಿದೆ.