Publish Date: Thu, 03 Mar 2022 (09:50 IST)
Updated Date: Thu, 03 Mar 2022 (10:08 IST)
ಬೆಂಗಳೂರು: ವನ್ಯ ಜೀವಿ ದಿನಾಚರಣೆ ಅಂಗವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಕ್ಯಾಮರಾ ಕೈ ಚಳಕವನ್ನು ಪ್ರದರ್ಶಿಸಿದ್ದಾರೆ.
ದರ್ಶನ್ ಗೆ ವನ್ಯ ಜೀವಿಗಳ ಮೇಲೆ ಎಷ್ಟು ಪ್ರೀತಿಯಿದೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಬಿಡುವು ಸಿಕ್ಕಾಗಲೆಲ್ಲಾ ಕ್ಯಾಮರಾ ಆತುಕೊಂಡು ಕಾಡಿನ ಕಡೆಗೆ ಪ್ರಯಾಣ ಬೆಳೆಸುತ್ತಾರೆ. ಇದೇ ರೀತಿ ತಾವು ತೆಗೆದ ಅಪರೂಪದ ಛಾಯಾಚಿತ್ರಗಳನ್ನು ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
ಇಂದು ವನ್ಯ ಜೀವಿ ದಿನಾಚರಣೆ ಅಂಗವಾಗಿ ಶುಭ ಹಾರೈಸುವುದರ ಜೊತೆಗೆ ಹುಲಿ, ಆನೆ ಸೇರಿದಂತೆ ತಾವು ಸೆರೆಹಿಡಿದ ಅಪರೂಪದ ಛಾಯಾಚಿತ್ರಗಳನ್ನು ಪ್ರಕಟಿಸಿದ್ದಾರೆ.