Webdunia - Bharat's app for daily news and videos

Install App

ದರ್ಶನ್ ಗಾಗಿ ಪರೋಕ್ಷವಾಗಿ ರೇಣುಕಾಸ್ವಾಮಿ ಕುಟುಂಬದವರ ಮನವೊಲಿಸಲು ಶ್ರಮಿಸುತ್ತಿದ್ದಾರಾ ಚಿತ್ರರಂಗದ ಆಪ್ತರು

Krishnaveni K
ಸೋಮವಾರ, 29 ಜುಲೈ 2024 (14:26 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ರನ್ನು ಬಚಾವ್ ಮಾಡಲು ಈಗ ಕನ್ನಡ ಚಿತ್ರರಂಗವೇ ಪರೋಕ್ಷವಾಗಿ ರೇಣುಕಾ ಕುಟುಂಬದವರ ಮನವೊಲಿಸಲು ಪ್ರಯತ್ನಿಸುತ್ತಿದೆಯಾ ಎಂಬ ಅನುಮಾನ ಮೂಡಿದೆ.

ದರ್ಶನ್ ರನ್ನು ಜೈಲಿನಲ್ಲಿ ಭೇಟಿಯಾಗಿ ಬರುವ ಚಿತ್ರನಟ ವಿನೋದ್ ರಾಜ್ ಮರುದಿನವೇ ರೇಣುಕಾಸ್ವಾಮಿ ಕುಟುಂಬಸ್ಥರನ್ನು ಭೇಟಿಯಾಗಿ ಧನಸಹಾಯ ಮಾಡಿದ ನೆಟ್ಟಿಗರು ಈ ಅನುಮಾನ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಮತ್ತೊಬ್ಬ ನಟ, ನಿರ್ಮಾಪಕ ಗಣೇಶ್ ರಾವ್ ರೇಣುಕಾಸ್ವಾಮಿ ಕುಟುಂಬದವರನ್ನು ಸಾಂತ್ವನಿಸುವ ನೆಪದಲ್ಲಿ ಭೇಟಿಯಾಗಿದ್ದಾರೆ.

ಅವರೂ ಕೂಡಾ ಚಿತ್ರದುರ್ಗದ ರೇಣುಕಾಸ್ವಾಮಿ ಮನೆಗೆ ಬಂದು ತಮ್ಮ ಕೈಲಾದ ಸಹಾಯ ಮಾಡಿದ ಬಳಿಕ ದರ್ಶನ್ ನನಗೆ ತಿಳಿದ ಮಟ್ಟಿಗೆ ಅಷ್ಟೊಂದು ಕ್ರೂರ ವ್ಯಕ್ತಿಯಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದನ್ನು ನೋಡಿ ಜನರ ಅನುಮಾನ ಇನ್ನಷ್ಟು ಹೆಚ್ಚಾಗಿದೆ.

ದರ್ಶನ್ ಪರವಾಗಿ ಅವರ ಆಪ್ತರು ರೇಣುಕಾ ಕುಟುಂಬದವರ ಮನವೊಲಿಸಲು ಪರೋಕ್ಷವಾಗಿ ಪ್ರಯತ್ನ ಮಾಡುತ್ತಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ. ಆಗಸ್ಟ್ 1 ರವರೆಗೆ ದರ್ಶನ್ ನ್ಯಾಯಾಂಗ ಬಂಧನ ಅವಧಿಯಿದೆ. ಅದಾದ ಬಳಿಕ ಅವರು ಜಾಮೀನಿಗೆ ಪ್ರಯತ್ನಿಸಬಹುದು. ಇದರ ನಡುವೆ ರೇಣುಕಾ ಕುಟುಂಬದ ಕ್ಷಮೆ ಸಿಕ್ಕರೆ ಅವರ ಹಾದಿ ಸುಗಮವಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Darshan: ವಿವಾಹ ವಾರ್ಷಿಕೋತ್ಸವಕ್ಕೆ ದರ್ಶನ್ ಜೊತೆಗಿರುವ ಫೋಟೋ ಹಾಕಿ ಸಖತ್ ಟಾಂಗ್ ಕೊಟ್ಟ ವಿಜಯಲಕ್ಷ್ಮಿ

Drithi PuneethRajkumar: ಪುನೀತ್ ಮಗಳ ಸಾಧನೆಯನ್ನು ಕೊಂಡಾಡಿದ ಶಿವರಾಜ್‌ಕುಮಾರ್‌

Thug Life Cinema:ನಟಿ ಅಭಿರಾಮಿ ಜತೆ ರೋಮ್ಯಾಂಟಿಕ್ ದೃಶ್ಯದಲ್ಲಿ ಕಮಲ್ ಹಾಸನ್‌, ಇದು ಬೇಕಿತ್ತಾ ಎಂದ ಫ್ಯಾನ್ಸ್‌

Vickey kaushal Birthday: ಪತಿ ಜತೆಗಿನ ಮುದ್ದು ಫೋಟೋ ಶೇರ್ ಮಾಡಿ ವಿಶ್ ಮಾಡಿದ ಕತ್ರಿನಾ

ನಿಜವಾದ ಹೀರೋಗಳ ಬಗ್ಗೆ ಬಾಲಿವುಡ್ ಸೆಲೆಬ್ರಿಟಿಗಳು ಮಾತಾಡ್ತಿಲ್ಲ: ಪವನ್ ಕಲ್ಯಾಣ್ ಅಸಮಾಧಾನ

ಮುಂದಿನ ಸುದ್ದಿ
Show comments