Select Your Language

Notifications

webdunia
webdunia
webdunia
webdunia

ಜೈಲು ಸೇರುತ್ತಿದ್ದಂತೇ ದರ್ಶನ್ ಗೆ ಮತ್ತೆ ಶುರುವಾಯ್ತು ಆ ಸಮಸ್ಯೆ

Darshan

Krishnaveni K

ಬೆಂಗಳೂರು , ಶುಕ್ರವಾರ, 15 ಆಗಸ್ಟ್ 2025 (14:35 IST)
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಬೇಲ್ ರದ್ದಾಗಿ ಜೈಲು ಸೇರುತ್ತಿದ್ದಂತೇ ನಟ ದರ್ಶನ್ ಗೆ ಮತ್ತೆ ಅದೇ ಸಮಸ್ಯೆ ಕಾಡತೊಡಗಿದೆಯಂತೆ. ಅದೇನು ಇಲ್ಲಿದೆ ನೋಡಿ ವಿವರ.

ನಿನ್ನೆಯಷ್ಟೇ ಸುಪ್ರೀಂಕೋರ್ಟ್ ದರ್ಶನ್ ಸೇರಿದಂತೆ 7 ಪ್ರಮುಖ ಆರೋಪಿಗಳಿಗೆ ಜಾಮೀನು ರದ್ದುಗೊಳಿಸಿತ್ತು. ಅದರ ಬೆನ್ನಲ್ಲೇ ಪೊಲೀಸರು ಮೂವರನ್ನೂ ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಇದೀಗ ಎಲ್ಲಾ ಆರೋಪಿಗಳೂ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ಎಲ್ಲಾ ಆರೋಪಿಗಳನ್ನೂ ಸದ್ಯಕ್ಕೆ ಒಂದೇ ಬ್ಯಾರಕ್ ನಲ್ಲಿಡಲಾಗಿದೆ. ಪವಿತ್ರಾ ಗೌಡ ಮಾತ್ರ ಮಹಿಳಾ ಬ್ಯಾರಕ್ ನಲ್ಲಿದ್ದಾರೆ. ಜೈಲಿಗೆ ಹೋದ ಬಳಿಕ ದರ್ಶನ್ ಒಂದೇ ದಿನಕ್ಕೆ ಮತ್ತೆ ತನಗೆ ಬೆನ್ನು ನೋವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ನಿನ್ನೆ ರಾತ್ರಿಯಿಡೀ ಬೆನ್ನು ನೋವು ಎಂದು ನಿದ್ರೆ ಮಾಡಿರಲಿಲ್ಲ ಎನ್ನಲಾಗುತ್ತಿದೆ.

ಈ ಹಿಂದೆ ಬೆನ್ನು ನೋವಿನ ನೆಪ ಹೇಳಿಯೇ ಅವರು ಜಾಮೀನು ಪಡೆದುಕೊಂಡಿದ್ದರು. ಶಸ್ತ್ರಚಿಕಿತ್ಸೆ ನಡೆಸದೇ ಇದ್ದರೆ ಪ್ಯಾರಲಿಸಿಸ್ ಆಗುವ ಸಾಧ್ಯತೆಯಿದೆ ಎಂದೆಲ್ಲಾ ಅವರ ವಕೀಲರು ನ್ಯಾಯಾಲಯಕ್ಕೆ ವರದಿ ನೀಡಿದ್ದರು. ಆದರೆ ಜಾಮೀನು ಸಿಗುತ್ತಿದ್ದಂತೇ ದರ್ಶನ್ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲಿಲ್ಲ. ಕೆಲವು ದಿನ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆದ ನಂತರ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಮತ್ತೆ ಜೈಲು ಸೇರಿದ ಬೆನ್ನಲ್ಲೇ ಬೆನ್ನು ನೋವಿನ ನೆಪ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಕೈದಿ ನಂಬರ್ ಎಷ್ಟು, ಟ್ಯಾಟೂ ಹಾಕಿಸಿಕೊಳ್ಳುವ ಡಿಬಾಸ್ ಫ್ಯಾನ್ಸ್ ನೋಡ್ಕೊಳ್ಳಿ