ಯಾರೇ ಆದರೂ ಬಿಡಲ್ಲ: ದರ್ಶನ್ ಗುಡುಗು

Webdunia
ಭಾನುವಾರ, 11 ಜುಲೈ 2021 (19:41 IST)
ನನ್ನ ದಾಖಲೆಗಳನ್ನು ತಿರುಚಿರುವುದು ಗೊತ್ತಾಗಿದೆ. ನನಗೆ ಮೋಸ ಮಾಡಲು ಯತ್ನಿಸಿದ್ದು ಯಾರು ಅಂತ ಗೊತ್ತಾದರೆ ಅವರನ್ನು ಖಂಡಿತ ಬಿಡಲ್ಲ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಗುಡುಗಿದ್ದಾರೆ.
ತನ್ನ ಹೆಸರಿನಲ್ಲಿ ಕೋಟ್ಯಂತ ರೂಪಾಯಿ ವಂಚನೆಗೆ ಯತ್ನ ನಡೆದಿರುವ ಬಗ್ಎಗ ಮೈಸೂರಿನಲ್ಲಿ ಪೊಲೀಸ್ ಠಾಣೆಗೆ ಹಾಜರಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ಬಗ್ಗೆ ನನಗೆ ಹೆಚ್ಚು ಏನೂ ಮಾಹಿತಿ ಇಲ್ಲ. ತನಿಖೆ ನಂತರ ಎಲ್ಲವನ್ನೂ ಹೇಳ್ತೀನಿ ಎಂದರು.
ನನ್ನ ದಾಖಲೆ ತಿರುಚಲಾಗಿದೆ ಎಂದು ಗೊತ್ತಾಗಿತ್ತು. ಒಂದು ತಿಂಗಳ ಹಿಂದೆ ನನ್ನ ಗಮನಕ್ಕೆ ಬಂತು. ಬ್ಯಾಂಕ್ ಮ್ಯಾನೇಜರ್ ಅನ್ನ ಯಾರು ಪರಿಚಯ ಮಾಡಿದರು? ಹೇಗೆ ಪರಿಚಯ ಮಾಡಿದರು ಅಂತ ಎಲ್ಲವೂ ವಿಚಾರಣೆ ಗೊತ್ತಾಗಲಿದೆ ಎಂದು ಅವರು ಹೇಳಿದರು.
ಆಯಮ್ಮ (ನಕಲಿ ಬ್ಯಾಂಕ್ ಮ್ಯಾನೇಜರ್) ಬಾಯಿ ಬಿಟ್ಟರೆ ಎಲ್ಲವೂ ಗೊತ್ತಾಗುತ್ತದೆ. ಪೊಲೀಸರು ತನಿಖೆಯಲ್ಲಿ ಬಾಯಿ  ಬಿಡಿಸ್ತಾರೆ. ತನಿಖೆ ವೇಳೆ ಮಾಹಿತಿ ಏನು ಬರುತ್ತೆ ಅನ್ನೋದು ಗೊತ್ತಿಲ್ಲ. ಇವತ್ತು ಪೊಲೀಸ್ ಬನ್ನಿ ಅಂತಾ ಕರೆದಿದ್ದರು ಬಂದಿದ್ದೇನೆ. ನಾನು ಕಥೆ ಹೇಳಿದ್ರೆ ಚೆನ್ನಾಗಿರಲ್ಲ. ಅವರು ಏನು ಹೇಳುತ್ತಾರೆ ಎಂಬುದರ ಮೇಲೆ ಎಲ್ಲವೂ ಗೊತ್ತಗುತ್ತೆ. ಸ್ನೇಹಿತರಿಂದಲೇ ಮೊಸ ಆಗಿದೆ ಅಂತಾ ಗೊತ್ತಾದರೇ. ಯಾರದರೂ ನಾನು ಬಿಡಲ್ಲ. ಅದು ಮಾತ್ರ ಗ್ಯಾರಂಟಿ ಎಂದು ದರ್ಶನ್ ಸ್ಪಷ್ಟಪಡಿಸಿದರು.
ಇದೇ ವೇಳೆ ಮಾತನಡಿದ ನಿರ್ಮಾಪಕ ಉಮಾಪತಿ, ಈ ಘಟನೆ ಬಗ್ಗೆ ನಮಗೆ ಒಂದು ತಿಂಗಳ ಹಿಂದೆಯೇ ಮಾಹಿತಿ ಬಂದಿತ್ತು. ಬೆಂಗಳೂರಿನ ಜಯನಗರ ಠಾಣೆಗೆ ದೂರು ನೀಡಿದ್ದೆವು. ಆದರೆ ಮೈಸೂರಿನಲ್ಲಿ ದೂರು ಕೊಟ್ಟರೆ ಒಳ್ಳೆಯದು ಎಂದು ಹೇಳಿದ್ದರಿಂದ ಇಲ್ಲಿ ದೂರು ನೀಡಿದ್ದೇವೆ. ತನಿಖೆ ಪೂರ್ಣಗೊಂಡ ನಂತರ ಎಲ್ಲವನ್ನೂ ಹೇಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸೂಪರ್‌ ಸ್ಟಾರ್‌ ಸಲ್ಮಾನ್ ಖಾನ್ ತಂದೆ ಸಲೀಮ್ ಖಾನ್ ಆರೋಗ್ಯದಲ್ಲಿ ಭಾರೀ ಏರುಪೇರು

ಕಿರಿಕ್ ಬೆಡಗಿ ರಶ್ಮಿಕಾ ಮದುವೆ ಆಹ್ವಾನದ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ

ಮೊದಲ ಮಗಳು ಗೌರಿ ಜೊತೆ ಸಂಬಂಧ ಹೇಗಿದೆ ಎಂದು ಬಿಚ್ಚಿಟ್ಟ ನಿರ್ದೇಶಕ ಎಸ್ ಮಹೇಂದರ್ Video

ಡಿಬಾಸ್, ಡಿಬಾಸ್ ಎಂದು ಕೂಗಿದ ಫ್ಯಾನ್ಸ್‌ಗೆ ದರ್ಶನ್ ಬಿಡುಗಡೆ ಬಗ್ಗೆ ಭವಿಷ್ಯ ನುಡಿದ ರವಿಚಂದ್ರನ್

ಲಂಡನ್‌ನಲ್ಲಿ ನೆಲೆಸಿದ್ದರು ಈ ಜಾಗದಲ್ಲಿ ಸಾಮಾನ್ಯರಂತಿರುವ ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ

ಮುಂದಿನ ಸುದ್ದಿ
Show comments