Publish Date: Fri, 29 Apr 2022 (18:50 IST)
Updated Date: Fri, 29 Apr 2022 (18:51 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ರಾಂತಿ ಸಿನಿಮಾಗಾಗಿ ಸಖತ್ ವರ್ಕೌಟ್ ಮಾಡುವ ವಿಡಿಯೋವೊಂದು ವೈರಲ್ ಆಗಿದೆ.
ಕ್ರಾಂತಿ ಮೊದಲ ಭಾಗದ ಚಿತ್ರೀಕರಣ ಮುಗಿದಿದ್ದು, ಕೊನೆಯ ಹಂತದ ಚಿತ್ರೀಕರಣ ಹಾಗೂ ಹಾಡಿನ ಚಿತ್ರೀಕರಣ ಬಾಕಿಯಿದೆ. ಇದಕ್ಕೂ ಮೊದಲು ದರ್ಶನ್ ಜಿಮ್ ನಲ್ಲಿ ಬೆವರು ಹರಿಸುತ್ತಿದ್ದು, ಸ್ಲಿಮ್ ಆಗಲು ಪ್ರಯತ್ನಿಸುತ್ತಿದ್ದಾರೆ.
ಕೊಂಚ ದಪ್ಪಗಿದ್ದ ದರ್ಶನ್ ಈಗ ವರ್ಕೌಟ್ ಮಾಡಿ ದೇಹ ತೂಕ ಇಳಿಸಿಕೊಂಡಿದ್ದು, ವಿಡಿಯೋ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.