Publish Date: Fri, 17 Apr 2026 (09:39 IST)
Updated Date: Fri, 17 Apr 2026 (09:42 IST)
ಬೆಂಗಳೂರು: ರಾವಣನ ತೋಟಕ್ಕೆ ಬಂದು ರಾಮ ಹಣ್ಣು ಕದ್ದ ಎಂದು ರಾಮಾಯಣದ ಬಗ್ಗೆ ಮನಬಂದಂತೆ ಮಾತನಾಡಿದ್ದ ನಟ ಪ್ರಕಾಶ್ ರಾಜ್ ವಿರುದ್ಧ ಕೊನೆಗೂ ಕ್ರಿಮಿನಲ್ ಕೇಸ್ ದಾಖಲಾಗಿದೆ.
ಕೇರಳದ ಸಾಹಿತ್ಯ ಉತ್ಸವದ ವೇದಿಕೆಯಲ್ಲಿ ಪ್ರಕಾಶ್ ರಾಜ್ ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳ ನಡುವಿನ ಸಂಘರ್ಷದ ಬಗ್ಗೆ ಮಾತನಾಡುವಾಗ ರಾಮಾಯಣವನ್ನು ಉಲ್ಲೇಖಿಸಿದ್ದು ಹಗುರವಾಗಿ ಮಾತನಾಡಿದ್ದರು. ಅವರ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ರಾಮ ಉತ್ತರ ಭಾರತದವನು. ರಾವಣ ಬುಡಕಟ್ಟು ಜನಾಂಗದವನು. ದಕ್ಷಿಣ ಭಾರತದ ಕಡೆಗೆ ಬರುವಾಗ ಲಕ್ಷ್ಮಣನಿಗೆ ಹಣ್ಣಿನ ತೋಟ ಕಂಡು ತಿನ್ನಬೇಕು ಎನಿಸಿತು. ಹೀಗಾಗಿ ಆತ ರಾಮನಿಗೆ ಹೇಳಿದ. ಹೀಗೆ ಅವರು ಹಣ್ಣು ಕಿತ್ತು ತಿಂದರು. ಅದನ್ನು ಶೂರ್ಪಣಖಿ ನೋಡಿದ್ಳು. ಹಣ್ಣು ತಿಂದಿದ್ದಕ್ಕೆ ಏನಾದರೂ ಕೊಡಬೇಕು ಎಂದು ಕೇಳಿದಳು. ಹಣ್ಣು ಕದ್ದ ಕಾರಣಕ್ಕೆ ಅವರ ನಡುವೆ ಸಂಘರ್ಷ ಆರಂಭವಾಯಿತು ಎಂದು ತಮ್ಮದೇ ಕತೆ ಕಟ್ಟಿ ರಾಮಾಯಣವನ್ನು ಎಳೆದು ತಂದಿದ್ದರು.
ಪ್ರಕಾಶ್ ರಾಜ್ ಹೇಳಿಕೆ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಭಾಷಾ ವಿವಾದದ ಬಗ್ಗೆ ಮಾತನಾಡುವಾಗ ಹಿಂದೂಗಳ ಧಾರ್ಮಿಕ ನಂಬಿಕೆಯನ್ನು ಎಳೆದು ತರುವುದು ಯಾಕೆ ಎಂದು ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಪ್ರಕಾಶ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ ಎಂದು ವರದಿಯಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ