Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ತಮ್ಮ ಕ್ಷೇತ್ರದಲ್ಲಿ ವರನಟ ಡಾ. ರಾಜಕುಮಾರ್ ಪ್ರತಿಮೆ ನಿರ್ಮಿಸುವ ವಿಚಾರವಾಗಿ ಮಾತನಾಡುವಾಗ ಕನ್ನಡದ ಕಣ್ಮಣಿ ಬಗ್ಗೆ ಉಡಾಫೆಯಿಂದ ಮಾತನಾಡಿ ವಿವಾದ ಸೃಷ್ಟಿಸಿಕೊಂಡ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಕ್ಷಮೆ ಯಾಚಿಸಿದ್ದಾರೆ.
ಡಾ. ರಾಜ್ ಪ್ರತಿಮೆ ಸ್ಥಾಪನೆ ಮಾಡುವ ವಿಚಾರದ ಬಗ್ಗೆ ತಮ್ಮ ಜೊತೆಗಿದ್ದವರೊಂದಿಗೆ ಬೇಜವಾಬ್ಧಾರಿಯುತವಾಗಿ ಮಾತನಾಡುತ್ತಿದ್ದ ಹ್ಯಾರಿಸ್ ವಿಡಿಯೋ ವೈರಲ್ ಆಗಿತ್ತು. ಪ್ರತಿಮೆ ಸ್ಥಾಪನೆಗೆ ಅಲ್ಲಿದ್ದವರು ಪ್ಲ್ಯಾನ್ ಹೇಳುತ್ತಿದ್ದರೆ, ಅದರ ಬಗ್ಗೆ ಉಡಾಫೆಯಾಗಿ ಪ್ರತಿಕ್ರಿಯಿಸುತ್ತಿದ್ದರು. ಇದು ಡಾ.ರಾಜ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇದು ವಿವಾದಕ್ಕೊಳಗಾಗುತ್ತಿದ್ದಂತೇ ವಿಡಿಯೋ ಮೂಲಕ ಹ್ಯಾರಿಸ್ ಕ್ಷಮೆ ಯಾಚಿಸಿದ್ದಾರೆ. ನನಗೆ ಅಣ್ಣಾವ್ರ ಬಗ್ಗೆ ಗೌರವವಿದೆ. ನಾನು ಅವರಿಗೆ ಅವಮಾನವಾಗುವ ಹಾಗೆ ಮಾತನಾಡಿಲ್ಲ. ಇಲ್ಲದೇ ಇರುವ ವಿಚಾರವನ್ನು ದೊಡ್ಡದು ಮಾಡಬೇಡಿ. ಇದನ್ನು ಇಲ್ಲಿಗೇ ಬಿಡಿ ಎಂದಿದ್ದಾರೆ.