ಕೊಚ್ಚಿ: ಒಂದು ಹಾಡಿನಲ್ಲಿ ಬರೀ ಒಂದು ಕಣ್ ಸನ್ನೆಯಿಂದಾಗಿ ಭಾರೀ ಸಂಚಲನ ಸೃಷ್ಟಿಸಿದ್ದ ನಟಿ ಪ್ರಿಯಾ ಪ್ರಕಾಶ್ ಮೇಲೆ ಇದೀಗ ಮೂಲಭೂತವಾದಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಹಾಡಿನಲ್ಲಿ ಪ್ರಿಯಾ ಪ್ರಕಾಶ್ ಹುಬ್ಬೇರಿಸಿ, ಕಣ್ಣು ಮಿಟುಕಿಸುವ ದೃಶ್ಯವಿದೆ. ಈ ಹಾಡು ಮುಸ್ಲಿಂ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ಆರೋಪ ಮಾಡಿರುವ ಮೂಲಭೂತವಾದಿಗಳು ಚಿತ್ರತಂಡ ಮತ್ತು ನಟಿ ಮೇಲೆ ಹೈದರಾಬಾದ್ ನ ಫಾರುಖ್ ನಗರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಕ್ವೀತ್ ಖಾನ್ ಎಂಬಾತ ದೂರುದಾರ ಎನ್ನಲಾಗಿದೆ.
ಮೊಹಮ್ಮದ್ ಪೈಗಂಬರ್ ರ ಪತ್ನಿ ಹೆಸರು ಈ ಹಾಡಿನಲ್ಲಿ ಉಲ್ಲೇಖವಾಗಿದೆ ಎಂದು ಆರೋಪಿಸಲಾಗಿದೆ. ಈ ಹಾಡಿನ ಮೂಲಕ ಪ್ರಿಯಾ ಪ್ರಕಾಶ್ ಬಾಲಿವುಡ್ ನಟಿಯರನ್ನೂ ಮೀರಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ