Publish Date: Thu, 06 May 2021 (09:23 IST)
Updated Date: Thu, 06 May 2021 (09:24 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ಹಾಸ್ಯ ನಟ ಚಿಕ್ಕಣ್ಣ ಲಾಕ್ ಡೌನ್ ಈ ಸಂಕಷ್ಟ ವೇಳೆಯಲ್ಲಿ ಕೊರೋನಾ ಸಂತ್ರಸ್ತರಿಗೆ ನೆರವಾಗುತ್ತಿದ್ದಾರೆ.
ತಮ್ಮ ಫಾರ್ಮ್ ಹೌಸ್ ನಲ್ಲಿರುವ ಚಿಕ್ಕಣ್ಣ ಅಲ್ಲಿ ಸುತ್ತಮುತ್ತಲಿರುವ ಹೋಂ ಕ್ವಾರಂಟೈನ್ ಆಗಿರುವ ಸೋಂಕಿತರಿಗೆ ಖುದ್ದಾಗಿ ಊಟ ತಯಾರಿಸಿ ಕೊಡುತ್ತಿದ್ದಾರೆ.
ಅಷ್ಟೇ ಅಲ್ಲ, ಬಿಡುವಿನ ವೇಳೆಯಲ್ಲಿ ತಮ್ಮ ಫಾರ್ಮ್ ಹೌಸ್ ನಲ್ಲಿ ತಮ್ಮ ಹಳೆಯ ಕಸುಬು ಗಾರೆ ಕೆಲಸವನ್ನೂ ಮಾಡುತ್ತಿದ್ದಾರೆ. ಬಿಡುವಿದ್ದಾಗಲೆಲ್ಲಾ ಇಲ್ಲಿಯೇ ಕಾಲ ಕಳೆಯುವ ಚಿಕ್ಕಣ್ಣ ಈಗ ಇದರ ಜೊತೆಗೆ ಜನಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ.