ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್, ಪತ್ನಿ ವಿಜಯಲಕ್ಷ್ಮಿ ಮತ್ತು ಪುತ್ರ ವಿನೇಶ್ ಈಗ ದುಬೈ ಪ್ರವಾಸದಲ್ಲಿದೆ. ವಿದೇಶದಲ್ಲಿ ಪತ್ನಿ ಜೊತೆಗೆ ದರ್ಶನ್ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮೊನ್ನೆಯೇ ಪತ್ನಿ, ಪುತ್ರನ ಜೊತೆಗೆ ದರ್ಶನ್ ದುಬೈ ವಿಮಾನವೇರಿದ್ದರು. ಇದೀಗ ದುಬೈನಲ್ಲಿ ತಮ್ಮ ಸ್ನೇಹಿತರ ಬಳಗದೊಂದಿಗೆ ದರ್ಶನ್ ದಂಪತಿ ಪಾರ್ಟಿ ಮಾಡಿದ್ದಾರೆ. ಈ ವೇಳೆ ದಂಪತಿ ಹೂಗುಚ್ಛ ವಿನಿಮಯ ಮಾಡಿ ಕೇಕ್ ಕಟ್ ಮಾಡಿಕೊಂಡು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.
ದರ್ಶನ್ ಗೆ ದುಬೈನಲ್ಲಿ ಸ್ನೇಹಿತರ ಬಳಗವಿದೆ. ಆಗಾಗ ಇಲ್ಲಿಗೆ ತೆರಳುತ್ತಿರುತ್ತಾರೆ. ಇದೀಗ ದುಬೈ ಸ್ನೇಹಿತರ ಮುಂದೆಯೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿ ದರ್ಶನ್ ಅಭಿಮಾನಿಗಳು ಶುಭಾಷಯಗಳ ಸುರಿಮಳೆಗೈದಿದ್ದಾರೆ.
ಇತ್ತ ದರ್ಶನ್-ವಿಜಯಲಕ್ಷ್ಮಿ ಫೋಟೋ ವೈರಲ್ ಆಗುತ್ತಿದ್ದಂತೇ ದರ್ಶನ್ ಸ್ನೇಹಿತೆ ಪವಿತ್ರಾಗೌಡ ಸೋಷಿಯಲ್ ಮೀಡಿಯಾದಲ್ಲಿ ಕರ್ಮ ಎಂದು ಬರೆದು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ವಿಜಯಲಕ್ಷ್ಮಿ ಮತ್ತು ಪವಿತ್ರಾ ಗೌಡ ನಡುವಿನ ಸೋಷಿಯಲ್ ಮೀಡಿಯಾ ವಾರ್ ಅಭಿಮಾನಿಗಳಿಗೆ ಹೊಸತೇನಲ್ಲ. ಈಗ ಪವಿತ್ರಾ ಮೆಸೇಜ್ ಎಲ್ಲರ ಗಮನ ಸೆಳೆದಿದೆ.