ಬೆಂಗಳೂರು: ಡ್ರಗ್ ಮಾಫಿಯಾಗೆ ಸಂಬಂಧಪಟ್ಟಂತೆ ಸಿಸಿಬಿ ಪೊಲೀಸರು ಸ್ಯಾಂಡಲ್ ವುಡ್ ನ ಖ್ಯಾತ ವಿನ್ಯಾಸಕ ರಮೇಶ್ ಡೆಂಬಲ ಅವರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದಾರೆ.
ಈ ಸಂಬಂಧ ನಿನ್ನೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದರು. ಇಂದು ತಮ್ಮ ವಕೀಲರ ಜತೆಗೆ ರಮೇಶ್ ಸಿಸಿಬಿ ಕಚೇರಿಗೆ ಆಗಮಿಸಿದ್ದು, ವಿಚಾರಣೆಗೆ ಹಾಜರಾಗಿದ್ದಾರೆ. ಈ ವೇಳೆ ಪೊಲೀಸರು ಅವರ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಈಗಾಗಲೇ ಡ್ರಗ್ ಪ್ರಕರಣದಲ್ಲಿ ಬಂಧಿತರಾಗಿರುವ ರಾಗಿಣಿ ದ್ವಿವೇದಿ ಸೇರಿದಂತೆ ಸ್ಯಾಂಡಲ್ ವುಡ್ ನ ಖ್ಯಾತ ನಟ-ನಟಿಯರೊಂದಿಗೆ ಆತ್ಮೀಯವಾಗಿರುವ ಫೋಟೋಗಳು, ಪೇಜ್ 3 ಪಾರ್ಟಿ ಫೋಟೋಗಳು ಅವರ ಸಾಮಾಜಿಕ ಜಾಲತಾಣ ಪುಟದಲ್ಲಿದೆ. ಹೀಗಾಗಿ ಅವರಿಗೂ ಡ್ರಗ್ ನಂಟಿದೆ ಎಂಬ ಗುಮಾನಿಯಿಂದ ವಿಚಾರಣೆಗೆ ಕರೆಯಲಾಗಿದೆ.