ನವದೆಹಲಿ: ಕಳೆದ ವರ್ಷ ಪ್ರಧಾನಿ ಮೋದಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ದಕ್ಷಿಣ ಭಾರತೀಯ ನಟರನ್ನು ಕಡೆಗಣಿಸಿದ್ದಕ್ಕೆ, ಅವರನ್ನು ನಡೆಸಿಕೊಂಡ ರೀತಿಗೆ ಎಸ್ ಪಿ ಬಾಲಸುಬ್ರಮಣ್ಯಂ ಅಸಮಾಧಾನ ಹೊರಹಾಕಿದ್ದಾರೆ.
ಕಳೆದ ವರ್ಷ ಅಕ್ಟೋಬರ್ ನಲ್ಲಿ ಪ್ರಧಾನಿ ಮೋದಿ ನಿವಾಸದಲ್ಲಿ ಸಿನಿ ಗಣ್ಯರಿಗಾಗಿ ಏರ್ಪಡಿಸಿದ್ದ ಔತಣಕೂಟದಲ್ಲಿ ಭಾಗವಹಿಸಿದಾಗ ತಮಗೆ ಎಂಟ್ರಿ ಕೊಡಲು ಭದ್ರತಾ ಅಧಿಕಾರಿಗಳು ತಕರಾರು ಮಾಡಿದ್ದರು. ಮೊಬೈಲ್ ಎಲ್ಲಾ ಬಿಟ್ಟು ಹೋಗಬೇಕು ಎಂದಿದ್ದರು. ಆದರೆ ಅಲ್ಲಿದ್ದ ಜನಪ್ರತಿನಿಧಿಯೊಬ್ಬರ ನೆರವಿನಿಂದ ಒಳಹೋಗಲು ಸಾಧ್ಯವಾಯಿತು. ಆದರೆ ಬಾಲಿವುಡ್ ಕಲಾವಿದರು ಮೊಬೈಲ್ ಒಳ ತೆಗೆದುಕೊಂಡು ಹೋಗಿದ್ದಲ್ಲದೆ, ಸೆಲ್ಫೀ ಕೂಡಾ ತೆಗೆಸಿಕೊಂಡಿದ್ದರು. ದಕ್ಷಿಣ ಭಾರತದ ಕಲಾವಿದರಿಗೆ ಮಾತ್ರ ಈ ತಾರತಮ್ಯವೇಕೆ ಎಂದು ಬಾಲಸುಬ್ರಮಣ್ಯಂ ಬಹಿರಂಗವಾಗಿಯೇ ಕಿಡಿ ಕಾರಿದ್ದರು.