Publish Date: Sun, 11 Apr 2021 (10:19 IST)
Updated Date: Sun, 11 Apr 2021 (10:20 IST)
ಹೈದರಾಬಾದ್ : ಇತ್ತೀಚೆಗೆ ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬವನ್ನು ಆಚರಿಸುವಾಗ ಅಭಿಮಾನಿಗಳು ಅತಿಯಾಗಿ ವರ್ತಿಸಿದ ಹಿನ್ನಲೆಯಲ್ಲಿ ಅವರ ಮೇಲೆ ಪ್ರಕರಣ ದಾಖಲಾಗಿದೆ ಎಂಬುದಾಗಿ ತಿಳಿದುಬಂದಿದೆ.
ನಟ ಅಲ್ಲು ಅರ್ಜುನ್ ಅವರು ಏಪ್ರಿಲ್ 8ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ಅಂದು ಅವರ ಅಭಿಮಾನಿಗಳು ಮಧ್ಯರಾತ್ರಿ ಅವರ ಮನೆಯ ಬಳಿ ಬಂದು ಬೀದಿಗಿಳಿದು ಪಟಾಕಿಗಳನ್ನು ಸಿಡಿಸಿದ್ದಾರೆ.
ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಅಲ್ಲದೇ ಪೊಲೀಸರ ಅನುಮತಿ ಇಲ್ಲದೆ ಈ ಕೆಲ ಮಾಡಿದ್ದಕ್ಕೆ ಹೈದರಾಬಾದ್ ನ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಕೆಲವು ಅಭಿಮಾನಿಗಳ ಮೇಲೆ ಸುಯೋ ಮೋಟೊ ಪ್ರಕರಣ ದಾಖಲಾಗಿದೆ.