ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ನೆನೆ ಸಿಹಿ ಪದಾರ್ಥ ಮಾಡುವ ವಿಡಿಯೋ ಹಂಚಿಕೊಂಡಿದ್ದಾರೆ.
ನಟಿ ಮಾಧುರಿ ದೀಕ್ಷಿತ್ ನೆನೆ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ತನ್ನ ಪಾಕಶಾಲೆಯ ಕೌಶಲ್ಯವನ್ನು ಪ್ರದರ್ಶಿಸುತ್ತಿದ್ದು, ಉಕಾಡಿಚೆ ಮೊದಕ್ ಪಾಕವಿಧಾನವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಉಕಾಡಿಚೆ ಮೊದಕ್ ಎಂಬುದು ಭಾರತೀಯ ಸಿಹಿ ತಿಂಡಿಯಾಗಿದ್ದು, ಬೇಯಿಸಿದ ಅಕ್ಕಿ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಬೆಲ್ಲ ಮತ್ತು ತುರಿದ ತೆಂಗಿನಕಾಯಿ ಮಿಶ್ರಣದಿಂದ ತುಂಬಿಸಲಾಗುತ್ತದೆ.
ಗಣೇಶ ಚತುರ್ಥಿ ಪಾಕವಿಧಾನಗಳಲ್ಲಿ ಇದು ಕಡ್ಡಾಯವಾಗಿ ಸೇರ್ಪಡೆಯಾಗಿದೆ.ಮಾಧುರಿ ಇನ್ಸ್ಟಾಗ್ರಾಮ್ ನಲ್ಲಿ ವೀಡಿಯೊ ಪೋಸ್ಟ್ ಮಾಡಿದ್ದಾರೆ.