ಬಾಲಿವುಡ್ ನಟ ಹಾಗೂ ತನ್ನ ಗೆಳೆಯ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ವಿಚಾರಣೆಗಾಗಿ ಸಿಬಿಐ ಎದುರು ನಟಿ ರಿಯಾ ಚಕ್ರವರ್ತಿ ಮೂರನೇ ಸಲ ಹಾಜರಾಗಿದ್ದಾರೆ.
28 ವರ್ಷದ ನಟಿ ರಿಯಾ ಚಕ್ರವರ್ತಿ ಮೇಲೆ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪವಿದೆ.
ಈ ಪ್ರಕರಣದ ವಿಚಾರಣೆಗಾಗಿ ಆಕೆಯ ಸಹೋದರ ಶೋಯಿಕ್ ಚಕ್ರವರ್ತಿಯನ್ನು ಸತತ ನಾಲ್ಕನೇ ದಿನವೂ ಕೇಂದ್ರೀಯ ತನಿಖಾ ದಳ (ಸಿಬಿಐ) ಕರೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಬೈ ಪೊಲೀಸ್ ವಾಹನದ ಬೆಂಗಾವಲಿನಲ್ಲಿ ರಿಯಾ ಹಾಗೂ ಶೋಯಿಕ್ ಇಬ್ಬರು ಸಿಬಿಐ ಅತಿಥಿ ಗೃಹಕ್ಕೆ ವಿಚಾರಣೆಗೆ ಆಗಮಿಸಿದ್ದಾರೆ.