Publish Date: Tue, 01 Aug 2017 (10:24 IST)
Updated Date: Tue, 01 Aug 2017 (10:53 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟ ಧ್ರುವ ಸಾವಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಬಹುಅಂಗಾಂಗ ವೈಕಲ್ಯದಿಂದಾಗಿ ಧ್ರುವ ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದು ಆತ್ಮಹತ್ಯೆಯಾಗಿರಬಹುದು ಎಂಬ ಅನುಮಾನಕ್ಕೆಡೆ ಮಾಡಿಕೊಡುವಂತಹ ವರದಿ ಸಿಕ್ಕಿದೆ ಎಂದು ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗಿದೆ.
ಇತ್ತೀಚೆಗೆ ಧ್ರುವಗಾಗಿ ತಂದೆ ಒಂದು ಕಂಪನಿ ಮಾಡಿಕೊಟ್ಟಿದ್ದರು. ಆದರೆ ಆ ಕಂಪನಿ ನಷ್ಟದಲ್ಲಿತ್ತು. ಈ ಲಾಸ್ ನಿಂದಾಗಿ ಅವರು ದಿಕ್ಕು ತೋಚದಂತಾಗಿದ್ದರು. ಹೀಗಾಗಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಬಗ್ಗೆ ಧ್ರುವ ತಂದೆ ಬೆಂಗಳೂರು ಪೊಲೀಸರಿಗೆ ತನ್ನ ಮಗ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ದೂರು ಕೊಟ್ಟಿದ್ದರು ಎಂದು ಖಾಸಗಿ ವಾಹಿನಿ ಹೇಳಿದೆ.
ಆಸ್ಪತ್ರೆಗೆ ಸೇರಿಸುವಾಗ ಆತನ ದೇಹದಲ್ಲಿ ವಿಷ ಸೇರಿಕೊಂಡಿತ್ತು. ಆಗಲೇ ಎಲ್ಲಾ ಅಂಗಾಂಗಳಿಗೂ ವಿಷ ತಟ್ಟಿತ್ತು ಎಂದು ಆಸ್ಪತ್ರೆ ಮೂಲಗಳಿಂದಲೂ ತಿಳಿದುಬಂದಿದೆ ಎಂದು ವಾಹಿನಿ ವರದಿ ಮಾಡಿದೆ. ಈ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಬೇಕಿದೆ ಎಂದೂ ವಾಹಿನಿ ಹೇಳಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ