ಹೈದರಾಬಾದ್ : ನೈಜ ಘಟನೆ ಆಧಾರಿತ ‘ದಿಶಾ ಎನ್ ಕೌಂಟರ್’ ಸಿನಿಮಾ ಮಾಡಲು ಹೊರಟ ಟಾಲಿವುಡ್ ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಬಿಗ್ ಶಾಕ್ ಎದುರಾಗಿದೆ.
ಹೌದು. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಹೈದರಾಬಾದ್ ನಲ್ಲಿ ನಡೆದ ದಿಶಾ ಎಂಬ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಕೇಸ್ ನ್ನು ಸಿನಿಮಾ ಮಾಡಲು ನಿರ್ಧರಿಸಿದ್ದು, ಅದಕ್ಕೆ ‘ದಿಶಾ ಎನ್ ಕೌಂಟರ್’ ಎಂದು ಟೈಟಲ್ ಕೂಡ ಇಟ್ಟಿದ್ದರು. ಆದರೆ ಈ ಸಿನಿಮಾವನ್ನು ನಿಷೇಧಿಸುವಂತೆ ಸೆನ್ಸಾರ್ ಮಂಡಳಿಗೆ ಆದೇಶ ನೀಡಬೇಕು ಎಂದು ಕೋರಿ ದಿಶಾಳ ತಂದೆ ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಆರ್ ಜಿವಿಯವರು ನಮ್ಮನ್ನು ಸಂಪರ್ಕಿಸದೆ ಸಿನಿಮಾ ಮಾಡಲು ಹೊರಟಿದ್ದಾರೆ. ಅಲ್ಲದೇ ದಿಶಾ ಬದಲಿಗೆ ಬೇರೆ ಹೆಸರನ್ನು ಬಳಸದೆ ಸಿನಿಮಾ ಮಾಡಲು ಹೊರಟಿದ್ದಾರೆ. ಯೂಟ್ಯೂಬ್ ನಲ್ಲಿ ಚಿತ್ರದ ಟ್ರೈಟರ್ ಹಾಕುವುದರ ಮೂಲಕ ಆರ್ ಜಿವಿ ನಮಗೆ ಅವಮಾನ ಮಾಡಿದ್ದಾರೆ. ಅಲ್ಲದೇ ಈ ಚಿತ್ರದಿಂದ ಗೌಪತ್ಯೆಗೆ ಸಂಬಂಧಪಟ್ಟ ವಿಷಯಗಳು ಹೊರಬೀಳುತ್ತದೆ ಎಂದು ಆರೋಪಿಸಿದ್ದಾರೆ.