ಚೆನ್ನೈ : 2005ರಲ್ಲಿ ಬಿಡುಗಡೆಯಾದ ಸೂಪರ್ ಹಿಟ್ ಚಿತ್ರ “ಅನ್ನಿಯಾನ್” ಯನ್ನು ಹಿಂದಿಗೆ ರಿಮೇಕ್ ಮಾಡಲು ಹೊರಟ ನಿರ್ದೇಶಕ ಶಂಕರ್ ಅವರಿಗೆ “ಅನ್ನಿಯಾನ್” ಚಿತ್ರ ನಿರ್ಮಾಪಕರಾದ ವಿ.ರವಿಚಂದ್ರನ್ ಅವರು ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ರಣವೀರ್ ಸಿಂಗ್ ಅವರು ಸೋಶಿಯಲ್ ಮೀಡಿಯಾದಲ್ಲಿ ಶಂಕರ್ ಅವರೊಂದಿಗೆ ತಮ್ಮ ಮುಂದಿನ ಚಿತ್ರವನ್ನು ಘೋಷಣೆ ಮಾಡಿದ್ದಾರೆ. ಹಾಗೂ ಇದು ಶಂಕರ್ ನಿರ್ದೇಶನದ ಅನ್ನಿಯಾನ್ ಚಿತ್ರದ ರಿಮೇಕ್ ಎಂದು ತಿಳಿಸಿದ್ದಾರೆ.
ಹೀಗಾಗಿ ನಿರ್ಮಾಪಕ ವಿ.ರವಿಚಂದ್ರನ್ ಅವರು ನಿರ್ದೇಶಕ ಶಂಕರ್ ಮತ್ತು ಬಾಲಿವುಡ್ ಪ್ರೊಡಕ್ಷನ್ ಹೌಸ್ ಗೆ ಪತ್ರ ಹಾಗೂ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಕೃತಿ ಸ್ವಾಮ್ಯ ಉಲ್ಲಂಘನೆಯನ್ನು ಉಲ್ಲೇಖಿಸಿ ಚಿತ್ರ ರಿಮೇಕ್ ಕೆಲಸ ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ. ಹಾಗೇ ಅನ್ನಿಯಾನ್ ಚಿತ್ರದ ಕಥೆಯ ಸಂಪೂರ್ಣ ಹಕ್ಕುಗಳನ್ನು ಬರಹಗಾರರಿಂದ ಖರೀದಿಸಿರುವುದಾಗಿ ಹೇಳಿದ್ದಾರೆ.