ಚೆನ್ನೈ : ನಟಿ ಸಮಂತಾ ಅವರು ನಿರ್ದೇಶಕ ಗುಣಶೇಖರ್ ನಿರ್ದೇಶನದ ಶಕುಂತಲಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಈ ಚಿತ್ರದ ಶೂಟಿಂಗ್ ಇತ್ತೀಚೆಗೆ ಹಠಾತ್ ಸ್ಥಗಿತಗೊಂಡಿತ್ತು.
ಹೌದು. ನಿರ್ದೇಶಕ ಗುಣಶೇಖರ್ ಅವರು ಕೊರೊನಾ ಪರೀಕ್ಷೆ ಮಾಡಿಸಿದ ಹಿನ್ನಲೆಯಲ್ಲಿ ಅವರು ಹೋಮ್ ಕ್ವಾರಂಟೈನ್ ಹೋದರು. ಹೀಗಾಗಿ ಈ ಚಿತ್ರದ ಶೂಟಿಂಗ್ ಸಡನ್ ಆಗಿ ನಿಂತುಹೋಯಿತು.
ಆದರೆ ನಿರ್ದೇಶಕ ಗುಣಶೇಖರ್ ಕೊರೊನಾ ಟೆಸ್ಟ್ ವರದಿ ತಪ್ಪಾಗಿದ್ದು, ಅವರು ಮತ್ತೆ ಟೆಸ್ಟ್ ಮಾಡಿಸಿದಾಗ ನೆಗೆಟಿವ್ ಬಂದಿದೆ. ಹಾಗಾಗಿ ಅವರಿಗೆ ಕೊರೊನಾ ಇಲ್ಲ ಎಂಬುದು ದೃಢಪಟ್ಟಿದೆ. ಹೀಗಾಗಿ ಟ್ವೀಟರ್ ನಲ್ಲಿ ನಿರ್ದೇಶಕರು ಮತ್ತೆ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಶಕುಂತಲಂ ಚಿತ್ರದ ಶೂಟಿಂಗ್ ಪುನರಾಂಭಿಸುವುದಾಗಿ ತಿಳಿಸಿದ್ದಾರೆ.