ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಮೊದಲನೆಯ ಬಾರಿಗೆ ಕಿರುತೆರೆಯಲ್ಲಿ ‘ವಾರಸ್ದಾರ’ ಎನ್ನುವ ಧಾರವಾಹಿ ನಿರ್ಮಿಸಿದ್ದ ಕಿಚ್ಚ ಸುದೀಪ್ ಗೆ ಚಿತ್ರೀಕರಣದಲ್ಲಿ ನಡೆದಿದ್ದ ಅವಾಂತರದಿಂದ ವಿವಾದವೊಂದು ಕೊರಳಿಗೆ ಸುತ್ತಿಕೊಂಡಿತ್ತು.
ಚಿಕ್ಕಮಗಳೂರಿನ ಮನೆಯೊಂದರಲ್ಲಿ ಈ ಧಾರವಾಹಿ ಶೂಟಿಂಗ್ ನಡೆಯುತ್ತಿತ್ತು. ಆದರೆ ಚಿತ್ರೀಕರಣ ಸಂದರ್ಭದಲ್ಲಿ ಧಾರವಾಹಿ ತಂಡ ತಮ್ಮ ಸ್ಥಿರಾಸ್ಥಿಗೆ ಹಾನಿ ಮಾಡಿದ್ದಾರೆ ಮತ್ತು ಚಿತ್ರೀಕರಣ ಮಾಡಿದ್ದಕ್ಕೆ ಸರಿಯಾಗಿ ಬಾಡಿಗೆ ಪಾವತಿಸಿಲ್ಲ ಎಂದು ಆರೋಪಿಸಿ ಮನೆ ಮಾಲಿಕ ದೀಪಕ್ ಮಯೂರ್ ಕೋರ್ಟ್ ಮೆಟ್ಟಿಲೇರಿದ್ದರು.
ಈ ಪ್ರಕರಣದ ವಿಚಾರಣೆ ಚಿಕ್ಕಮಗಳೂರಿನ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಆ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿದೆ. ಈ ಕುರಿತಂತೆ ನಟ ಸುದೀಪ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾ. ಅರವಿಂದ್ ಕುಮಾರ್ ಅಧೀನ ನ್ಯಾಯಾಲಯದಲ್ಲಿ ವಿಚಾರಣೆಗೆ ಮಧ್ಯಂತರ ತಡೆ ನೀಡಿದೆ. ಹೀಗಾಗಿ ಸದ್ಯಕ್ಕೆ ಸುದೀಪ್ ಈ ಪ್ರಕರಣದಿಂದ ನಿರಾಳರಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ