Select Your Language

Notifications

webdunia
webdunia
webdunia
webdunia

BIG BOSS: ಕನ್ನಡ ಮಾತಿನಿಂದಲೇ ಟ್ರೋಲಾಗುತ್ತಿದ್ದ ಯೂಟ್ಯೂಬರ್‌ ರಕ್ಷಿತಾ ಶೆಟ್ಟಿ ದೊಡ್ಮನೆಗೆ ಎಂಟ್ರಿ

Kannada Bigg Boss, actor Kiccha Sudeep, YouTuber Rakshita Shetty

Sampriya

ಬೆಂಗಳೂರು , ಭಾನುವಾರ, 28 ಸೆಪ್ಟಂಬರ್ 2025 (18:16 IST)
Photo Credit X
ಬೆಂಗಳೂರು: ಕಿಚ್ಚ ಸುದೀ‍ಪ್‌ ಸಾರಥ್ಯದಲ್ಲಿ ಕನ್ನಡದ 12ನೇ ಆವೃತ್ತಿಯ ಬಿಗ್‌ಬಾಸ್‌ ಇಂದು ಆರಂಭಗೊಂಡಿದೆ. ಈ ಬಾರಿ ಯಾರೆಲ್ಲಾ ಸ್ಪರ್ಧಿಗಳು ದೊಡ್ಮನೆಗೆ ಪ್ರವೇಶಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ಯುಟ್ಯೂಬ್‌ನಲ್ಲಿ ಸೆನ್ಸೆಷನ್‌ ಸೃಷ್ಟಿಸಿದ ತುಳುನಾಡಿನ ರಕ್ಷಿತಾ ಶೆಟ್ಟಿ ಬಿಗ್‌ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ರಕ್ಷಿತಾ ಮಾತು ಕೇಳಿ ನಿರೂಪಕ ಕಿಚ್ಚ ಸುದೀಪ್ ಒಂದು ಕ್ಷಣ ಶಾಕ್ ಆಗಿದ್ದಾರೆ. 

ರಕ್ಷಿತಾ ಯೂಟ್ಯೂಬ್‌ನಲ್ಲಿ ಅಡುಗೆ ಮಾಡುತ್ತಾ, ಕನ್ನಡ ಮಾತಾಡಾಲು ಪಡುವ ಕಷ್ಟ ಎಲ್ಲರಿಗೂ ಗೊತ್ತೇ ಇದೆ. ಆದರೆ ಬಿಗ್‌ಬಾಸ್‌ನಲ್ಲಿ ಅವರ ಆಟದ ವೈಖರಿ ಹಾಗೂ ಅಡುಗೆ ಮಾಡುವ ಶೈಲಿ, ಕನ್ನಡ ಮಾತುಗಳನ್ನ ಕೇಳಲು ಪ್ರೇಕ್ಷಕರು ಕುತೂಹಲ ಕೆರಳಿಸಿದ್ದಾರೆ.

ರಕ್ಷಿತಾ ಅವರು ಸುದೀಪ್ ಮುಂದೆ ಅಡುಗೆ ಮಾಡುವ ಪರಿ ವಿವರಿಸಿದ್ದಾರೆ. ಇಷ್ಟಕ್ಕೆ ಕಿಚ್ಚ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಮೂಲತಃ ಮಂಗಳೂರಿನವರಾದ ರಕ್ಷಿತಾ ಮುಂಬೈನಲ್ಲಿ ವಾಸವಾಗಿದ್ದಾರೆ. ಹೀಗಾಗಿ ಕನ್ನಡ ಮಾತಾಡಲು ರಕ್ಷಿತಾ ತ್ರಾಸ ಪಡುತ್ತಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

BBK12: ಬಿಗ್ ಬಾಸ್ ಪ್ರವೇಶಿಸಲಿರುವ 14 ಸ್ಪರ್ಧಿಗಳು ಇವರೇ