ಕೊಚ್ಚಿ: ಮಲಯಾಳಂ ಮೂಲದ ನಟಿ ಭಾವನಾ ಕರ್ನಾಟಕದ ಹುಡುಗನನ್ನು ಮದುವೆಯಾದ ಬಳಿಕ ಬೆಂಗಳೂರಿನಲ್ಲೇ ಸೆಟ್ಲ್ ಆಗಿದ್ದರು. ಇಲ್ಲಿಯೇ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದರು.
ಆದರೆ ಈಗ ದಿಡೀರ್ ತವರಿನತ್ತ ಮುಖ ಮಾಡಿದ್ದಾರೆ. ಲೈಂಗಿಕ ಕಿರುಕುಳ ಪ್ರಕರಣದ ನಂತರ ಭಾವನಾ ಮಲಯಾಳಂ ಚಿತ್ರರಂಗದಿಂದ ದೂರವಾಗಿದ್ದರು. ಒಂದು ರೀತಿಯ ಅಘೋಷಿತ ನಿಷೇಧಕ್ಕೊಳಗಾಗಿದ್ದರು.
ಆದರೆ ಈಗ ಮತ್ತೆ ಮಲಯಾಳಂನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಹಲವು ವರ್ಷಗಳ ಬ್ರೇಕ್ ಬಳಿಕ ಭಾವನಾ ಎಂದಿ ಕಾಕ್ಕಾಕ್ಕೊರು ಪ್ರೇಮಮುಂಡಾಯಿರುನ್ನು ಎಂಬ ಸಿನಿಮಾ ಮೂಲಕ ಮಲಯಾಳಂ ಸಿನಿಮಾಗೆ ರಿ ಎಂಟ್ರಿ ಕೊಡುತ್ತಿದ್ದಾರೆ.