ಮೈಸೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಇಂದು ಬಿಡುಗಡೆಯಾಗಿದೆ. ಡಾ.ರಾಜ್ ಕುಟುಂಬ ಬೆಳಿಗ್ಗೆಯೇ ವೀರೇಶ್ ಚಿತ್ರಮಂದಿರದಲ್ಲಿ ಒಟ್ಟಾಗಿ ಕುಳಿತು ಸಿನಿಮಾ ವೀಕ್ಷಿಸಿದೆ. ಆದರೆ ಶಿವಣ್ಣ ಮಾತ್ರ ಈ ಸಂದರ್ಭದಲ್ಲಿ ಇರಲಿಲ್ಲ.
ಶಿವರಾಜ್ ಕುಮಾರ್ ಇದೀಗ ಮೈಸೂರಿನಲ್ಲಿದ್ದು, ಇಂದು ಸಂಜೆ 4 ಗಂಟೆಗೆ ಮೈಸೂರಿನ ಸರಸ್ವತಿಪುರಂನಲ್ಲಿ ತಮ್ಮ ಸ್ನೇಹಿತರ ಜೊತೆ ಕುಳಿತು ಸಿನಿಮಾ ವೀಕ್ಷಿಸಲಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು, ಪುನೀತ್ ಸಿನಿಮಾವನ್ನು ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ನೋಡಿ ಭಾವುಕರಾಗಿದ್ದಾರೆ. ಕೆಲವರು ಚಿತ್ರಮಂದಿರದಲ್ಲಿ ಅಪ್ಪುವನ್ನು ನೋಡಿ ಕಣ್ಣೀರು ಸುರಿಸಿದ್ದಾರೆ.