ಬೆಂಗಳೂರು: ರಿಷಬ್ ಶೆಟ್ಟಿ ಮೊದಲ ಬಾರಿಗೆ ನಾಯಕರಾಗಿ ಅಭಿನಯಿಸಿದ್ದ ಬೆಲ್ ಬಾಟಂ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾವೀಗ ಜಪಾನ್ ಗೆ ಕಾಲಿಡುತ್ತಿದೆ.
ಅಮೆರಿಕಾ, ಇಂಗ್ಲೆಂಡ್, ಸಿಂಗಾಪುರಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಿ ವೀಕ್ಷಕರ ಮೆಚ್ಚುಗೆ ಪಡೆದಿತ್ತು. ಇನ್ನೀಗ ಜಪಾನ್ ನಲ್ಲೂ ಬಿಡುಗಡೆಯಾಗಲಿದೆ.
ಸೆಪ್ಟೆಂಬರ್ ನಲ್ಲಿ ಜಪಾನ್ ನಲ್ಲಿ ಚಿತ್ರ ಬಿಡುಗಡೆಯಾಗಲಿದೆ. ರಾಜ್ಯದಲ್ಲಿ ಈ ಚಿತ್ರ ತೆರೆ ಕಂಡು ನೂರು ದಿನ ಯಶಸ್ವಿಯಾಗಿ ಪೂರೈಸಿದ್ದೂ ಆಗಿದೆ. ಈಗ ಶೆಟ್ಟರ ಬೆಲ್ ಬಾಟಂ ಜಪಾನ್ ವೀಕ್ಷಕರಿಗೆ ಯಾವ ಮಟ್ಟಿಗೆ ಮೋಡಿ ಮಾಡುತ್ತಾ ಕಾದು ನೋಡಬೇಕು.