Daily Horoscope

Select Your Language

Notifications

webdunia
webdunia
webdunia
webdunia

BBK13: ಒಂದು ಸೀಸನ್ ನಲ್ಲಿ ಒಬ್ರು ಇಬ್ರು ದಡ್ಡರಿದ್ರೆ ಓಕೆ, ಇಷ್ಟೂ ಇಲ್ವಾ ತಲೆಯಲ್ಲಿ: ಮನೆಮಂದಿಗೆ ಕಿಚ್ಚನ ಕ್ಲಾಸ್

BBK13
ಬೆಂಗಳೂರು: ಈ ಬಾರಿ ಯಾಕೋ ಬಿಗ್ ಬಾಸ್ ಕನ್ನಡ ಶೋ ಪ್ರತೀ ವೀಕೆಂಡ್ ನಲ್ಲಿ ಕಿಚ್ಚನಿಗೆ ಮನೆಯವರಿಗೆ ಕ್ಲಾಸ್ ತೆಗೆದುಕೊಳ್ಳುವುದೇ ಕೆಲಸವಾಗುತ್ತಿದೆ. ಈ ವಾರವೂ ಮನೆಯವರು ಟಾಸ್ಕ್ ನಲ್ಲಿ ಮಾಡಿದ ತಪ್ಪಿಗೆ ಕಿಚ್ಚ ತಲೆಯಲ್ಲಿ ಇಷ್ಟೂ ಬುದ್ಧಿ ಇಲ್ವಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವಾರ ಬಿಗ್ ಬಾಸ್ ಮನೆ ಮಂದಿಗೆ ಪಝಲ್ ಟಾಸ್ಕ್ ಕೊಟ್ಟಿತ್ತು. ಇದಕ್ಕೆ ಎರಡು ತಂಡಗಳ ಪರವಾಗಿ ಕಾವ್ಯಾ ಮತ್ತು ಗಾನವಿ ಉಸ್ತುವಾರಿಗಳಾಗಿದ್ದರು. ಆದರೆ ಇಬ್ಬರೂ ನಿಯಮಗಳನ್ನು ತಮಗೆ ಬೇಕಾದಂತೆ ಮಾಡಿ ಟಾಸ್ಕ್ ನ್ನೇ ರದ್ದು ಮಾಡುವಂತೆ ಮಾಡಿದ್ದರು.

ಆದರೆ ವಿಪರ್ಯಾಸವೆಂದರೆ ಕೊನೆಯಲ್ಲಿ ಬಿಗ್ ಬಾಸ್ ಇಬ್ಬರನ್ನು ಕ್ಯಾಪ್ಟನ್ ಓಟದಿಂದ ಹೊರಗಿಡಿ ಎಂದಾಗ ಮನೆ ಮಂದಿಯೆಲ್ಲಾ ಈ ಇಬ್ಬರನ್ನು ಬಿಟ್ಟು ಚೆನ್ನಾಗಿ ಆಡಿದ್ದ ಪ್ರಶಾಂತ್ ಮತ್ತು ಆಸಿಯಾರನ್ನು ಹೊರಗಿಟ್ಟರು.

ಇದೇ ವಿಚಾರವಾಗಿ ಇಂದು ವಾರದ ಪಂಚಾಯ್ತಿಯಲ್ಲಿ ಮನೆ ಮಂದಿಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಪ್ರೋಮೋ ಈಗ ಕುತೂಹಲ ಹೆಚ್ಚಿಸಿದೆ. ಟಾಸ್ಕ್ ರದ್ದಾಗಿದ್ದು ಯಾರಿಂದ, ಕೊನೆಗೆ ಕ್ಯಾಪ್ಟನ್ ಓಟದಿಂದ ಹೊರಗಿಟ್ಟಿದ್ದು ಯಾರನ್ನು? ಒಂದು ಸೀಸನ್ ನಲ್ಲಿ ಒಬ್ರೋ, ಇಬ್ರೋ ದಡ್ಡರಿದ್ದರೆ ಓಕೆ, ಆದರೆ ಮನೆ ಮಂದಿಯೆಲ್ಲಾ ದಡ್ಡರಾ? ಒಬ್ರಿಗೂ ತಲೆಯಲ್ಲಿ ಬುದ್ಧಿ ಇಲ್ವಾ’ ಎಂದು ಕಿಚ್ಚ ವಾಚಮಗೋಚರವಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ವೀಕ್ಷಕರ ಅಭಿಪ್ರಾಯವೂ ಇದೇ ಆಗಿತ್ತು. ಟಾಸ್ಕ್ ರದ್ದಾಗಲು ಕಾರಣವಾಗಿದ್ದ ಗಾನವಿ ಮತ್ತು ಕಾವ್ಯಾರನ್ನು ಹೊರಗಿಡಲಿಲ್ಲ ಯಾಕೆ ಎಂದು ವೀಕ್ಷಕರು ಪ್ರಶ್ನೆ ಮಾಡಿದ್ದರು. ಇದೀಗ ಕಿಚ್ಚ ಇದೇ ವಿಚಾರವನ್ನು ಎತ್ತಿ ಮನೆಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಆರತಿ ಪಡೆದು ತಿಲಕ ಹಚ್ಚಿಕೊಳ್ಳಲು ನಿರಾಕರಿಸಿದ ಬಾಲಿವುಡ್ ನಿರ್ದೇಶಕಿ ಫರಾ ಖಾನ್: ನೆಟ್ಟಿಗರ ಟಾಂಗ್ Video