Select Your Language

Notifications

webdunia
webdunia
webdunia
webdunia

BB 12: ಕನ್ನಡ ಹಿರಿಯ ನಟಿ ಈ ಬಾರಿಯ ಬಿಗ್‌ಬಾಸ್‌ಗೆ ಎಂಟ್ರಿ ಸಾಧ್ಯತೆ

ನಟಿ ಸುಧಾರಾಣಿ

Sampriya

ಬೆಂಗಳೂರು , ಬುಧವಾರ, 10 ಸೆಪ್ಟಂಬರ್ 2025 (17:01 IST)
Photo Credit X
ಕಿರುತೆರೆ ಲೋಕದ ಅತೀ ದೊಡ್ಡ ರಿಯಾಲಿಟಿ ಶೋ ಕನ್ನಡ ಬಿಗ್‌ಬಾಸ್‌ 12 ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಈಗಾಗಲೇ ಮನೆಗೆ ಎಂಟ್ರಿ ಕೊಡುವವರ ಸಂಭವನೀಯ ಪಟ್ಟಿ ಹರಿದಾಡುತ್ತಿದೆ. 

ಇದೀಗ ಕನ್ನಡ ಖ್ಯಾತ ಹಿರಿಯ ನಟಿಯೊಬ್ಬರು ಈ ಭಾರಿಯ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಾರೆಂಬ ಸುದ್ದಿಯಿದೆ. 

ಪ್ರತಿಭಾರಿಯೂ ಕಾರ್ಯಕ್ರಮ ಪ್ರಸಾರವಾಗೋದಕ್ಕೂ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್‌ ಆಗಿರುವ, ವಿವಾದಿತ ಹಾಗೂ ಕಿರುತೆರೆ ನಟ ನಟಿಯರ ಹೆಸರು ಬಹಿರಂಗವಾಗುವುದು ಸಾಮಾನ್ಯ. 

ಿದೀಗ ಸಾಮಾಜಿಕ ಜಾಲತಾಣದಲ್ಲಿ ನಟಿ ಸುಧಾರಾಣಿ ಅವರು ಈ ಬಾರಿಯ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಖ್ಯಾತ ನಟಿ ಸುಧಾರಾಣಿ, ಸುದೀಪ್  ಜೊತೆಯೂ ನಟಿಸಿದ್ದ ನಟಿ, ಇವರು ಬಿಗ್‌ಬಾಸ್‌ಗೆ ಹೋಗ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಅವರು ಅಭಿನಯಿಸುತ್ತಿದ್ದ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಶ್ರೀರಸ್ತು ಶುಭಮಸ್ತು ಸೀರಿಯಲ್ ಮುಗಿದಿದ್ದು, ಇದೀಗ ಅವರು ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುದೆ. 

ಸೋಶಿಯಲ್‌ ಮೀಡಿಯಾದಲ್ಲೂ ಆಕ್ಟೀವ್‌ ಆಗಿದ್ದು, ಹೆಚ್ಚು ಫಾಲವೋರ್ಸ್‌ ಹೊಂದಿರುವ ಹಿರಿಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇವರು ಬಿಗ್‌ಬಾಸ್ ಸೀಸನ್ 12ರ ಹೈಲೈಟ್ ಕಂಟೆಸ್ಟಂಟ್‌ ಎನ್ನಲಾಗುತ್ತಿದೆ.

ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ ಸುಧಾರಾಣಿ ಅವರಿಗೂ ಬಿಗ್‌ಬಾಸ್‌ಗೆ ಆಹ್ವಾನ ಹೋಗಿದೆ ಎನ್ನಲಾಗಿದೆ. 

ಈ ವಿಚಾರವಾಗಿ ಸುಧಾರಾಣಿ ತಮ್ಮ ಇನ್‌ಸ್ಟಾಪೇಜ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. `ಯಾರ್ ಹೇಳಿದ್ದು’ ಎಂದು ಕೇಳಿ ಸಾಕ್ಷಿ ಕೇಳಿದ್ದಾರೆ. ಹೀಗಾಗಿ ಸುಧಾರಾಣಿ ಈ ಮಾತು ಸದ್ಯಕ್ಕೆ ಗೊಂದಲ ಸೃಷ್ಟಿಸಿದ್ದರೂ ಬಿಗ್‌ಬಾಸ್ ಮನೆಯಲ್ಲಿ ಸುಧಾರಾಣಿ ನೋಡುವ ಕುತೂಹಲವಂತೂ ಪ್ರೇಕ್ಷಕರಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಹುಕೋಟಿ ವಂಚನೆ ಪ್ರಕರಣ: ನಟ ಧ್ರುವ ಸರ್ಜಾಗೆ ಬಿಗ್ ರಿಲೀಫ್‌